ಸಾಲ ತೀರಿಸಲಾಗದ ವ್ಯಕ್ತಿ ಮಾಡಿದ್ದಾನೆ ಇಂತಹ ನೀಚ ಕೆಲಸ

ಭಾನುವಾರ, 24 ಫೆಬ್ರವರಿ 2019 (12:11 IST)
ಮಧ್ಯಪ್ರದೇಶ : ಸಾಲ ತೀರಿಸಲಾಗದ ಪತಿಯೊಬ್ಬ ಸಾಲಕ್ಕೆ ಬದಲಾಗಿ  ತನ್ನ ಪತ್ನಿಯನ್ನೇ ಸಾಲ ಕೊಟ್ಟವನಿಗೆ ನೀಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಕೊಹಾಡಿ ಗ್ರಾಮದಲ್ಲಿ ನಡೆದಿದೆ.

ಕೊಹಾಡಿ ಗ್ರಾಮದ ಯುವಕನೊಬ್ಬ ಅದೇ ಗ್ರಾಮದ ಇನ್ನೊಬ್ಬ ವ್ಯಕ್ತಿಯಿಂದ ಸಾಲ ಪಡೆದಿದ್ದ. ಆದರೆ  ಸಾಲ ತೀರಿಸಲು ಆಗದೇ ಕೊನೆಗೆ ಸಾಲಕ್ಕೆ ಬದಲು ತನ್ನ ಪತ್ನಿ ನೀಡುವುದಾಗಿ ಹೇಳಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಸಾಲ ಕೊಟ್ಟವನನ್ನು ಮನೆಗೆ ಕರೆದು ಪತ್ನಿ ಮೇಲೆ ಅತ್ಯಾಚಾರ ಮಾಡಿಸಿದ್ದಾನೆ. ಬಳಿಕ ಈ ವಿಚಾರವನ್ನು ಯಾರಿಗೆ ತಿಳಿಸದಂತೆ ಬೆದರಿಕೆ ಹಾಕಿದ್ದಾನೆ.

 

ಈ ಘಟನೆಯ ಬಳಿಕ ತವರಿಗೆ ಬಂದ ಪತ್ನಿ, ತನ್ನ ಪತಿಯ ವಿರುದ್ಧ  ಪೊಲೀಸರಿಗೆ ದೂರು ನೀಡಿದ್ದಾಳೆ. ವಿಚಾರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ ಕೋರ್ಟ್ ಗೆ ಒಪ್ಪಿಸಿದ್ದಾರೆ. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಪತಿ ಹಾಗೂ ಅತ್ಯಾಚಾರಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ