ತನ್ನ ಎದುರು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ವ್ಯಕ್ತಿಗೆ ಮಹಿಳೆ ಮಾಡಿದ್ದೇನು ಗೊತ್ತಾ?

ಶುಕ್ರವಾರ, 31 ಆಗಸ್ಟ್ 2018 (14:19 IST)
ಮುಂಬೈ : ಮಹಿಳೆಯೊಬ್ಬಳು ತನ್ನ ಎದುರು ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ವ್ಯಕ್ತಿಯ ಮೇಲೆ ಬಿಸಿ ಎಣ್ಣೆಯನ್ನು ಎರಚಿ ಆತನ ಕೈ, ಭುಜವನ್ನು ಸುಟ್ಟು ಗಾಯಗೊಳಿಸಿದ  ಘಟನೆ ಬಾದ್ಲಾಪುರದ ರೋಹಿದಾಸ್ ನಗರದಲ್ಲಿ ನಡೆದಿದೆ.


ಆ ವ್ಯಕ್ತಿ ವಿಕ್ರಮ್ ಸಿಂಗ್ (30) ರೋಹಿದಾಸ್ ನಗರದ ನಿವಾಸಿ ಎಂಬುದಾಗಿ ಗುರುತಿಸಲಾಗಿದೆ. ಇತ ಮನೆಗೆ ತೆರಳುತ್ತಿರುವ ಸಮಯದಲ್ಲಿ ಮನೆಯೊಂದರ ಅಡುಗೆಯ ಮನೆಯ ಕಿಟಕಿಯಲ್ಲಿ ಮಹಿಳೆಯೊಬ್ಬಳನ್ನು ಕಂಡು ಆಕೆಯ ಎದುರೆ ಹಸ್ತಮೈಥುನ ಮಾಡಿಕೊಳ್ಳಲು ಪ್ರಾರಂಭಿಸಿದ್ದಾನೆ. ಜೊತೆಗೆ ಅಶ್ಲೀಲವಾದ ಸನ್ನೆಗಳನ್ನು ಮಾಡಿದನು.


ಇದರಿಂದ ಕೋಪಗೊಂಡ ಮಹಿಳೆ ಅಡುಗೆ ಮಾಡಲು ಕಾಯಿಸುತ್ತಿರುವ ಎಣ್ಣೆಯನ್ನು ಕಿಟಕಿಯ ಮೂಲಕ  ಆತನ ಮೇಲೆ ಎರಚಿದಿದ್ದಾಳೆ. ಇದು ಆತನ ಭುಜ ಹಾಗೂ ಕೈಮೇಲೆ ಬಿದ್ದು ಸುಟ್ಟುಹೋಗಿದೆ. ಮಹಿಳೆ ಮಾಡಿದ ಈ ಕೆಲಸಕ್ಕೆ ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ನಂತರ ಆತನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ಬಾದ್ಲಾಪುರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅಲ್ಲದೇ ಆತ ತನ್ನ ಮೇಲೆ ಹಲ್ಲೆ ಮಾಡಿದ ಮಹಿಳೆ ವಿರುದ್ಧ ದೂರು ನೀಡಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ