ತಂಗಿಯನ್ನ ಪ್ರೀತಿಸಿದ ಯುವಕನಿಗೆ ಅಣ್ಣ ಮಾಡಿದ್ದೇನು ಗೊತ್ತಾ?

ಗುರುವಾರ, 24 ಜನವರಿ 2019 (06:34 IST)
ಬೆಂಗಳೂರು : ತಂಗಿಯನ್ನ ಪ್ರೀತಿಸಿದ್ದಕ್ಕೆ ಯುವಕನ ಮೇಲೆ ಆಕೆ ಅಣ್ಣ ಲಾಂಗ್​​ ನಿಂದ ಹಲ್ಲೆ ಮಾಡಿರುವ ಘಟನೆ ದಾಸರಹಳ್ಳಿಯಲ್ಲಿ ನಡೆದಿದೆ.

ಮಂಜುನಾಥ ಹಲ್ಲೆಗೊಳಗಾದ ಪ್ರಿಯಕರನಾಗಿದ್ದು, ಸೋಮ ಹಲ್ಲೆ ಮಾಡಿದ ಯುವಕ. ಮಂಜುನಾಥ, ಸೋಮ ಎಂಬುವನ ತಂಗಿಯನ್ನ ಪ್ರೀತಿಸುತ್ತಿದ್ದ. ಈ ವಿಷಯ ತಿಳಿದ ಸೋಮ ಅನೇಕ ಬಾರಿ ವಿರೋಧಿಸಿ, ಮಂಜುನಾಥನಿಗೆ ಎಚ್ಚರಿಕೆ ಕೂಡ ನೀಡಿದ್ದ. ಆದರೆ ಅದನ್ನ ಲೆಕ್ಕಿಸದ ಮಂಜುನಾಥ ತನ್ನ ಪ್ರೀತಿ ಮುಂದುವರೆಸಿದ್ದ. ಇದರಿಂದ ಕೋಪಗೊಂಡ ಸೋಮ ತನ್ನ ಸಹಚರರ ಜೊತೆ ಸೇರಿ ದಾಸರಹಳ್ಳಿ ಬೇಕರಿ ಪಕ್ಕ ನಿಂತಿದ್ದ ಮಂಜುನಾಥ ಮತ್ತು ಸ್ನೇಹಿತರಾದ ಶರತ್, ಚೇತನ್, ಕಿರಣ್ ಮತ್ತು ಚರಣ್ ಮೇಲೆ ಲಾಂಗ್ ​​ನಿಂದ ಹಲ್ಲೆ ಮಾಡಿದ್ದಾರೆ.

 

ಈ ಘಟನೆ ಸಂಬಂಧಪಟ್ಟಂತೆ  ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

                                                                                                      

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ