ಇಸ್ಲಾಂ ಧರ್ಮಕ್ಕೆ ಮತಾಂತರನಾಗಿ ಮುಸ್ಲಿಂ ಮಹಿಳೆಯನ್ನು ಮದುವೆಯಾದ ಯುವಕ. ಆಮೇಲೆ ಆಗಿದ್ದೇನು ಗೊತ್ತಾ?

ಶನಿವಾರ, 19 ಜನವರಿ 2019 (06:50 IST)
ಗುಜರಾತ್ : ಮುಸ್ಲಿಂ ಮಹಿಳೆಯನ್ನು ಮದುವೆಯಾಗಲು ಇಸ್ಲಾಂ ಧರ್ಮಕ್ಕೆ ಮತಾಂತರನಾದ ಯುವಕನೊಬ್ಬ ಆಕೆಯನ್ನು ಮದುವೆಯಾದ ಮೇಲೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತ್‍ನಲ್ಲಿ ನಡೆದಿದೆ.

ರಾಜ್‍ಕೋಟ್ ಮೂಲದ ಪಿಯೂಶ್ ಸೋಲಂಕಿ (22) ಅಲಿಯಾಸ್ ಸಲೀಂ ಆತ್ಮಹತ್ಯೆ ಮಾಡಿಕೊಂಡ ಯುವಕ. ಮುಸ್ಲಿಂ ಮಹಿಳೆ ಸಲೀನಾಳನ್ನು ಪ್ರೀತಿಸಿದ್ದ ಪಿಯೂಶ್ ಸೋಲಂಕಿ ಇಸ್ಲಾಂ ಧರ್ಮಕ್ಕೆ ಮತಾಂತರನಾಗಿ 2017ರಲ್ಲಿ ಸಲೀನಾಳನ್ನು ಮದುವೆಯಾಗಿದ್ದ. ಆದರೆ ಸಲೀನಾ ಮಾಜಿ ಪ್ರೇಮಿ ಇದಿರಿಸ್ ಸಿಪಾಯಿ (22) ಎಂಬಾತ ತಾನು ಹಾಗೂ ಸಲೀನಾ ಜೊತೆಗೆ ತೆಗೆದುಕೊಂಡ ಅಶ್ಲೀಲ ಫೋಟೋಗಳನ್ನು ಪಿಯೂಶ್‍ ಗೆ ತೋರಿಸಿ ಸಲೀನಾಳನ್ನು ಬಿಟ್ಟುಬಿಡುವಂತೆ ಎಚ್ಚರಿಕೆ ನೀಡಿದ್ದಾನೆ.


 

ಈ ಹಿನ್ನಲೆಯಲ್ಲಿ ಜಾಮ್‍ನಗರ ಜಿಲ್ಲೆಯ ಧ್ರೋಲ್‍ನ ಗಾಯತ್ರಿನಗರದಲ್ಲಿ ಜನವರಿ 14ರಂದು ಸಂಜೆ ಮನೆಯಲ್ಲಿ ಪಿಯೂಶ್ ಸೋಲಂಕಿ ನೇಣು ಹಾಕಿಕೊಂಡಿದ್ದಾನೆ. ಮಾಜಿ ಗೆಳೆಯ ಇದಿರಿಸ್ ಪಿಯೂಶ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಎಂದು ಸಲೀನಾ ಬುಧವಾರ ದೂರು ನೀಡಿದ್ದಾಳೆ.  ಈ ಹಿನ್ನಲೆಯಲ್ಲಿ ಗುಜರಾತ್‌ನ ಧ್ರೋಲ್ ಪೊಲೀಸರು ಆರೋಪಿ ಇದಿರಿಸ್‌ ಗಾಗಿ ಹುಡುಕಾಟ ಶುರು ಮಾಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ