ಅನೈತಿಕ ಸಂಬಂಧಕ್ಕೆ ಆತ ಮಾಡಿದ್ದೇನು ಗೊತ್ತಾ?

ಭಾನುವಾರ, 23 ಜೂನ್ 2019 (19:45 IST)
ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಆತ ಮಾಡಬಾರದ ಕೆಲಸ ಮಾಡಿ ಈಗ ಕಂಬಿ ಎಣಿಸುವಂತಾಗಿದೆ.

ಅನೈತಿಕ ಸಂಬಂಧ ಹಿನ್ನಲೆಯಲ್ಲಿ ಕೊಲೆ ಮಾಡಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಕಲಬುರಗಿ ನಗರದ ನೆಹರು ಗಂಜ್ ನ ಎಪಿಎಂಸಿ ಪ್ರದೇಶದಲ್ಲಿ ಸಂಜೀವನಗರದ ನಾಗರಾಜ ಹನಮಂತ ಶಿಂಧೆ (26) ಎಂಬ ಯುವಕನ ಕೊಲೆ ಆಗಿತ್ತು. ಈ ಪ್ರಕರಣ ಜಾಡು ಹಿಡಿದು ತನಿಖೆ ಕೈಗೊಂಡ ಪೊಲೀಸರು ಬಸವನಗರದ ಶಿವಕುಮಾರ ತಿಪ್ಪಣ್ಣ ಮುದ್ನಾಳಕರ್ ( 30) ಎಂಬಾತನನ್ನು ಬಂಧನ ಮಾಡಿದ್ದಾರೆ.

ಅನೈತಿಕ ಸಂಬಂಧ ಹಿನ್ನಲೆಯಲ್ಲಿ ನಾಗರಾಜ ಶಿಂಧೆಯನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಈ ಕುರಿತು ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಚೌಕ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಶಿವಕುಮಾರ ಮುದ್ನಾಳಕರ್ ನನ್ನು ಬಂಧಿಸಿದ್ದಾರೆ.ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ