ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪ್ರಕರಣದಲ್ಲಿ ಆದ ನಷ್ಟವೆಷ್ಟು ಗೊತ್ತಾ?
ಮಂಗಳವಾರ, 18 ಆಗಸ್ಟ್ 2020 (10:15 IST)
ಬೆಂಗಳೂರು : ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆಯಲ್ಲಿ 9.5ಕೋಟಿಗೂ ಅಧಿಕ ಆಸ್ತಿ ನಷ್ಟವಾಗಿದೆ ಎನ್ನಲಾಗಿದೆ.
ಗಲಭೆಯ ನಷ್ಟದ ವರದಿ ನೀಡಲು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಪ್ರತ್ಯೇಕ ತಂಡ ರಚಿಸಲಾಗಿದೆ. ಎಫ್ ಐಆರ್ ಅನ್ವಯ ಅಂದಾಜು ನಷ್ಟ ಪಟ್ಟಿ ಸಿದ್ಧ ಪಡಿಸಲಾಗಿದೆ. ಡಿಜೆ ಠಾಣೆ ನಷ್ಟದ ಬಗ್ಗೆ ಪಿಡ್ಲ್ಯೂಡಿ ಇಲಾಖೆ ವರದಿ ಸಲ್ಲಿಸಿದೆ. ಸುಟ್ಟ ವಾಹನಗಳ ಬಗ್ಗೆ ಆರ್.ಟಿಒ ಅಧಿಕಾರಿಗಳ ವರದಿ ನೀಡಿದ್ದಾರೆ. ಹಾಗೇ ಕೇಸ್ ಹೆಚ್ಚಾದಂತೆ ನಷ್ಟದ ಮೊತ್ತ ಏರಿಕೆಯಾಗಲಿದೆ ಎನ್ನಲಾಗಿದೆ.