ತನ್ನ ಅಕ್ರಮ ಸಂಬಂಧ ಪತ್ನಿಗೆ ತಿಳಿಯಿತೆಂದು ಪತಿ ಮಾಡಿದ್ದೇನು ಗೊತ್ತಾ?
ಬುಧವಾರ, 31 ಮಾರ್ಚ್ 2021 (07:06 IST)
ಬೆಂಗಳೂರು : ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಪತ್ನಿಗೆ ತಿಳಿದ ಹಿನ್ನಲೆಯಲ್ಲಿ ಹೋಟೆಲ್ ಮಾಲೀಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮಾಲೀಕನಗೆ ಮದುವೆಯಾಗಿದ್ದರೂ ಕೂಡ ತನ್ನ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮಗಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಕೆಗೆ ಮಗುವಿದ್ದು, ಪತಿಯಿಂದ ದೂರವಿದ್ದಳು. ಮಾಲೀಕನ ಅಕ್ರಮ ಸಂಬಂಧ ಆತನ ಪತ್ನಿಗೆ ತಿಳಿದ ಹಿನ್ನಲೆಯಲ್ಲಿ ಪತ್ನಿ ಆ ಸಂಬಂಧದ ವಿರುದ್ಧ ಎಚ್ಚರಿಕೆ ನೀಡಿದ್ದಾಳೆ. ಇದರಿಂದ ಬೇಸರಗೊಂಡ ಮಾಲೀಕ ಹೋಟೆಲ್ ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಬಗ್ಗೆ ಮಾಲೀಕನ ಪತ್ನಿ, ಪತಿ ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮೇಲೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.