ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಗೆ ಯುವಕ ಮಾಡಿದ್ದೇನು ಗೊತ್ತಾ?

ಗುರುವಾರ, 5 ಸೆಪ್ಟಂಬರ್ 2019 (10:32 IST)
ಬೆಂಗಳೂರು : ಯುವಕನೊಬ್ಬ ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯ ಫೋನ್ ನಂಬರ್ ನ್ನು ಪೋರ್ನ್ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿದ ಘಟನೆ ನಡೆದಿದೆ.




ಇಂದಿರಾ ನಗರ ನಿವಾಸಿಯಾಗಿರುವ ಮಹಮ್ಮದ್ ಮುದಾಸಿರ್ ಎಂಬಾತ ಯುವತಿಯೊಬ್ಬಳು ತನ್ನನ್ನು ಪ್ರೀತಿಸಲು ನಿರಾಕರಿಸಿದಕ್ಕೆ ಕೋಪಗೊಂಡು  ಆಕೆಯ ಮೊಬೈಲ್ ನಂಬರನ್ನು ಪೋರ್ನ್ ವೆಬ್ ಸೈಟ್ ಗೆ ಅಪ್ಲೋಡ್ ಮಾಡಿ ಸೆಕ್ಸ್ ಗಾಗಿ ಈ ನಂಬರ್ ಗೆ ಸಂಪರ್ಕಿಸಿ ಎಂದು ಪೋಸ್ಟ್ ಹಾಕಿದ್ದಾನೆ.


ಇದರ ಪರಿಣಾಮ ಯುವತಿಗೆ ಅಶ್ಲೀಲ ಕರೆ, ಮೆಸೇಜ್ ಬಂದಿದ್ದರಿಂದ ಪೋರ್ನ್ ವೆಬ್ ಸೈಟ್ ಗೆ ತನ್ನ ಮೊಬೈಲ್ ಸಂಖ್ಯೆ ಅಪ್ಲೋಡ್ ಆಗಿರುವುದು ತಿಳಿದಿದೆ. ತಕ್ಷಣ ಯುವತಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ