ಇಂಜೆಕ್ಷನ್ ನೀಡಿ ವಿದ್ಯಾರ್ಥಿಯನ್ನು ಯಮಲೋಕಕ್ಕೆ ಕಳಿಸಿದ ನಕಲಿ ಡಾಕ್ಟರ್ !

ಶನಿವಾರ, 27 ಅಕ್ಟೋಬರ್ 2018 (17:23 IST)
ಗಡಿನಾಡು ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಜಾಸ್ತಿಯಾಗಿದೆ. ಎರಡು ದಿನಗಳ ಕೆಳಗೆ ನಕಲಿ ಡಾಕ್ಟರ್ ವಿದ್ಯಾರ್ಥಿಗೆ ಇಂಜೆಕ್ಷನ್ ನೀಡಿ ಯಮಲೋಕಕ್ಕೆ ಕಳಿಸಿದ್ದಾರೆ,

ಸುಮಾರು 300 ನಕಲಿ ವೈದ್ಯರು ನಕಲಿ ಕ್ಲೀನಿಕ್ಗಳನ್ನು ಓಪನ್ ಮಾಡಿ ರೋಗಿಗಳ ಪ್ರಾಣದ ಜೊತೆಗೆ ಚಲ್ಲಾಟವಾಡುತ್ತಿದ್ದರೆ, ನಕಲಿ ಡಾಕ್ಟರ್ಗಳು ಹಾವಳಿ ಹೆಚ್ಚಾದ್ರು ಆರೋಗ್ಯಾಧಿಕಾರಿಗಳು ನಕಲಿ ಡಾಕ್ಟರಗಳ ವಿರುದ್ದ ಸಮರ ಸಾರಲು ಮನಸು ಮಾಡುತ್ತಿಲ್ಲಾ ಎಂದು ಜನರು ದೂರುತ್ತಿದ್ದಾರೆ.  

ಬೀದರ್ ನಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರುತ್ತಿದೆ. ಒಂದು ಕಡೆ ನಕಲಿ ಡಾಕ್ಟರ್ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿಯಾಗಿದ್ದಾರೆ.  
ಬೀದರನಲ್ಲಿ ಆರ್ ಎಂ ಪಿ, ಕೋಲ್ಕತ್ತಾ ಮತ್ತು ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದು ರೋಗಿಗಳಿಂದ ಹೆಚ್ಚು ಹಣ ಸುಲಿಗೆ ಮಾಡಿ ರೋಗಿಗಳನ್ನು ಯಮನ ಪಾದ ಸೇರಿಸುತ್ತಿದ್ದಾರೆ. ಸುಮಾರು 300ಕ್ಕೂ ನಕಲಿ ವೈದ್ಯರು ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ನಕಲಿ ಕ್ಲೀನಿಕ್ಗಳನ್ನು ಒಪ್ಪನ್ ಮಾಡಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡೊದಲ್ಲದೆ ಪ್ರಾಣಕ್ಕೆ ಶಾಶ್ವತ ಟಿಕೆಟ್ ನೀಡುತ್ತಿದ್ದಾರೆ.
 ಕ್ಲಿನಿಕ್ಗೆ ಯಾವುದೇ ಪರವಾನಿಗೆ ಹೊಂದಿರುವುದಿಲ್ಲಾ, ವೈದ್ಯರ ಬಳಿ ಯಾವುದೇ ಪದವಿ ಕೂಡಾ ಇರೋದಿಲ್ಲಾ, ಆದ್ರೂ ಇವರು ರೋಗಿಗಳಿಗೆ ಚಿಕಿತ್ಸೆ ನೀಡಿ ರೋಗಿಗಳ ಪ್ರಾಣದ ಜೊತೆ ಚಲ್ಲಾಟ ಆಡುತ್ತಿದ್ದಾರೆ.

ಯಾವುದೆ ಪದವಿ ಪಡೆಯದೆ ವೈದ್ಯನೆಂದ ಹೇಳಿಕೊಂಡು ಚಿಕಿತ್ಸೆ ನೀಡುತ್ತಿದ್ದ ಪ್ರೇಮ ದಾಸ್ ವಿದ್ಯಾರ್ಥಿ ಸಾವನ್ನಪ್ಪುತ್ತಿದಂತ್ತೆ ಕ್ಲಿನಿಕ್ಗೆ ಬೀಗ ಹಾಕಿ ನಕಲಿ ವೈದ್ಯನೊಬ್ಬ ಪರಾರಿಯಾಗಿದ್ದಾನೆ. ಹಲವು ವರ್ಷಗಳಿಂದ ನಕಲಿ ವೈದ್ಯರ ಹಾವಳಿಗೆ ಜಿಲ್ಲೆಯ ರೋಗಿಗಳು ನಲುಗಿ ಹೋಗಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ