ನರೇಂದ್ರ ಮೋದಿ ವಿರುದ್ಧ ಕೆಂಡಕಾರುತ್ತಿರುವ ವೈದ್ಯರು
ಕೇಂದ್ರ ಸರಕಾರವು ಹೊಸ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದ್ದರ ವಿರುದ್ಧ ವೈದ್ಯರು ಗರಂ ಆಗಿದ್ದಾರೆ.
ಸಂವಿಧಾನದ ಅನುಚ್ಛೇದ 14 ನ್ನು ಕೇಂದ್ರ ಸರಕಾರ ಸ್ಪಷ್ಟವಾಗಿ ಉಲ್ಲಂಘನೆ ಮಾಡಿದೆ. ಧರ್ಮಗಳ ನಡವೆ ಅಂತರವನ್ನು ತಂದು ದೇಶದಲ್ಲಿ ಜನರನ್ನು ಒಂದುಗೂಡಿಸುವ ಬದಲು ಹೊಸ ಕಾಯ್ದೆ ಒಡೆದು ಆಳುವ ನೀತಿಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಜ. 16 ರಂದು ನಡೆಯುವ ಪ್ರತಿಭಟನಾ ಮೆರವಣಿಗೆಯಲ್ಲಿ ಮೆಡಿಕಲ್, ಹೋಮಿಯೋಪತಿ, ಆಯುರ್ವೇದ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಪಾಲ್ಗೊಳ್ಳುತ್ತಿದ್ದಾರೆ ಎಂದಿದ್ದಾರೆ.