ಬೆಂಗಳೂರಿಗರೇ ನೀವು ಮುದ್ದಾಗಿ ಸಾಕುವ ನಾಯಿಯಿಂದಲೇ ಅಪಾಯ ಎದುರಾಗಬಹುದು

Krishnaveni K

ಮಂಗಳವಾರ, 28 ಮೇ 2024 (10:13 IST)
ಬೆಂಗಳೂರು:  ಶ್ವಾನ ಪ್ರಿಯ ಬೆಂಗಳೂರಿಗರಿಗೆ ಪಶು ವೈದ್ಯರು ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದಾರೆ.  ಮುದ್ದಾಗಿ ಸಾಕುವ ನಿಮ್ಮ ನಾಯಿಯಿಂದಲೇ ಅಪಾಯ ಎದುರಾಗಬಹುದು ಎಂದಿದ್ದಾರೆ.

ಬೆಂಗಳೂರಿನಲ್ಲಿ ನಾಯಿಗಳಿಗೆ ಇತ್ತೀಚೆಗೆ ಇಲಿ ಜ್ವರ ಹೆಚ್ಚಾಗುತ್ತಿದೆ. ಇದು ಜನರಿಗೂ ಹರಡುವ ಅಪಾಯವಿದೆ. ಹೀಗಾಗಿ ನಿಮ್ಮ ನಾಯಿಗಳು ಜ್ವರಕ್ಕೆ ತುತ್ತಾದರೆ ಎಚ್ಚರವಾಗಿರಬೇಕು ಎಂದು ಪಶು ವೈದ್ಯರು ಎಚ್ಚರಿಸಿದ್ದಾರೆ.

ಇಲಿ ಜ್ವರ ಎನ್ನುವುದು ಇಲಿಗಳ ಮೂತ್ರದಿಂದ ಹರಡುತ್ತದೆ. ಇದು ನಾಯಿಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ. ನಾಯಿಗಳಿಂದ ಇದು ಮನುಷ್ಯರಿಗೂ ಹರಡುವ ಅಪಾಯವಿದೆ. ನಾಯಿಗಳಿಗೆ ಇದಕ್ಕೆ ಲಸಿಕೆ ಹಾಕಿಸಿಕೊಳ್ಳಬಹುದು. ಆದರೆ ಮನುಷ್ಯರಿಗೆ ಯಾವುದೇ ಲಸಿಕೆಯಿಲ್ಲ. ಹೀಗಾಗಿ ಎಚ್ಚರಿಕೆಯಿಂದಿರಬೇಕು.

ನಾಯಿಗಳಿಗೆ ಅತೀವ ಜ್ವರ, ಕಣ್ಣುಗಳು ಹಳದಿಗಟ್ಟುವುದು, ವಾಂತಿ ಬೇಧಿ ಇತ್ಯಾದಿ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಚಿಕಿತ್ಸೆ ಮಾಡಿಸಬೇಕು. ಜ್ವರ ಪೀಡಿತ ನಾಯಿಗಳನ್ನು ಮಕ್ಕಳಿಂದ ದೂರವೇ ಇಡಬೇಕು ಎಂದು ವೈದ್ಯರು ಎಚ್ಚರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ