ಬಿಜೆಪಿ ಅಭ್ಯರ್ಥಿಯಾಗಿ ಅಜಯ್ ಕುಮಾರ್ ಸ್ಪರ್ಧಿಸಲಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ದೇವರಮನೆ ಶಿವಕುಮಾರ್ ಕಣಕ್ಕೀಳಿಯಲಿದ್ದಾರೆ. ಹಾಗೇ ಈಗಾಗಲೇ ಮೇಯರ್ ಹುದ್ದೆ ಆಕಾಂಕ್ಷಿಗಳು ಪಾಲಿಕೆ ಪ್ರವೇಶಿಸಿದ್ದಾರೆ.
ಅಲ್ಲದೇ ಮತದಾನಕ್ಕೆ ಎಂಎಲ್ ಸಿ ಗಳು ಹೆಲಿಕಾಪ್ಟರ್ ನಲ್ಲಿ ಆಗಮಿಸಿದದ್ದಾರೆ. ಆದರೆ ಕಾಂಗ್ರೆಸ್ ನ ಮೂವರು ಸದಸ್ಯರು ಪಾಲಿಕೆಗೆ ಬರುವುದು ವಿಳಂಬವಾಗಿದ್ದು, ಇದರಿಂದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲು ಮಾಸ್ಟರ್ ಪ್ಲ್ಯಾನ್ ರೂಪಿಸಿದೆಯಾ? ಎಂಬ ಅನುಮಾನ ವ್ಯಕ್ತವಾಗಿದೆ.