KKRDB ಅಧ್ಯಕ್ಷರ ನೇಮಕ ಮಾಡದ ಹಿನ್ನಲೆ; ಸರ್ಕಾರದ ಮೇಲೆ ಕೆಲ ಬಿಜೆಪಿ ಶಾಸಕರ ಅಸಮಾಧಾನ
ಮಂಗಳವಾರ, 18 ಫೆಬ್ರವರಿ 2020 (10:07 IST)
ಬೆಂಗಳೂರು : KKRDB (ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ )ಗೆ ಇನ್ನೂ ಅಧ್ಯಕ್ಷರ ನೇಮಕ ಮಾಡದ ಹಿನ್ನಲೆ ರಾಜ್ಯ ಸರ್ಕಾರದ ಮೇಲೆ ಕೆಲವು ಶಾಸಕರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಈ ಬಗ್ಗೆ ಕಲ್ಯಾಣ ಕರ್ನಾಟಕ ಭಾಗದ ಕೆಲ ಬಿಜೆಪಿ ಶಾಸಕರ ಬೇಸರ ಹೊರಹಾಕಿದ್ದಾರೆ. 1500 ಕೋಟಿ ರೂಪಾಯಿ ಅನುದಾನದ ಕೆಕೆಆರ್ ಡಿಬಿ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಹೊಂದಿರುವ ಅಧ್ಯಕ್ಷ ಸ್ಥಾನವಾಗಿದ್ದು, ಆದರೆ ಮಂಡಳಿಗೆ ಅಧ್ಯಕ್ಷರ ನೇಮಕವಾಗದಿದ್ದರಿಂದ ಅಭಿವೃದ್ಧಿಗೆ ಕಂಟಕ ಎದುರಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ. ಕಲ್ಯಾಣ ಕರ್ನಾಟಕ ಭಾಗದ ಸಚಿವರೇ ಅಧ್ಯಕ್ಷರಾಗುತ್ತಿದ್ದರು. ಆದ್ರೆ ಅದಕ್ಕೆ ತಿದ್ದುಪಡಿ ಮಾಡಿರುವ ರಾಜ್ಯ ಬಿಜೆಪಿ ಸರ್ಕಾರ ಸಚಿವರ ಬದಲಾಗಿ ಶಾಸಕರು ಅಧ್ಯಕ್ಷರಾಗುವಂತೆ ತಿದ್ದುಪಡಿ ತಂದಿದೆ. ಹೀಗಾಗಿ ಬಿಜೆಪಿ ಶಾಸಕರು ಅಧ್ಯಕ್ಷರಾಗಲು ತುದಿಗಾಲಿ ನಿಂತಿದಿದ್ದರೂ ಕೂಡ ಇನ್ನೂ ಸರ್ಕಾರ KKRDB ಅಧ್ಯಕ್ಷರನ್ನು ನೇಮಿಸದ ಕಾರಣ ಸರ್ಕಾರದ ಮೇಲೆ ಒಳಗೊಳಗೆ ಅಸಮಾಧಾನ ವ್ಯಕ್ತವಾಗಿದೆ ಎನ್ನಲಾಗಿದೆ.