ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುತ್ತಾನೆಯೇ: ಬಿಜೆಪಿ

Sampriya

ಮಂಗಳವಾರ, 1 ಅಕ್ಟೋಬರ್ 2024 (16:09 IST)
ಬೆಂಗಳೂರು: ಸಿದ್ದರಾಮಯ್ಯ ಅವರು ಈ ಹಿಂದೆ ಹೇಳಿದಂತೆ ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುತ್ತಾನೆಯೇ ಎಂದು ಬಿಜೆಪಿ ಪ್ರಶ್ನೆ ಮಾಡಿದೆ.

14 ಸೈಟು ವಾಪಾಸ್ ನೀಡುವ ವಿಚಾರವಾಗಿ ಬಿಜೆಪಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ  ಸಿಎಂ ಸಿದ್ದರಾಮಯ್ಯರ ಹಳೆಯ ವಿಡಿಯೋವೊಂದನ್ನು ಶೇರ್ ಮಾಡಿದೆ.

ಆ ವಿಡಿಯೋದಲ್ಲಿ ಸಿದ್ದರಾಮಯ್ಯ ಅವರು, ತೆಗೆದುಕೊಂಡಿರುವ ಸೈಟ್‌ ಅನ್ನು ಈಗ ಸರೆಂಡರ್ ಮಾಡಿದ್ದಾರೆ. ತಪ್ಪು ಮಾಡದಿದ್ದರೆ ಸೈಟ್‌ ಅನ್ನು ಯಾಕೆ ಸರೆಂಡರ್ ಮಾಡುತ್ತಿದ್ದರು. ಕಾನೂನು ಬದ್ಧವಾಗಿ ಮಾಡಿದ್ದರೆ ಯಾಕೆ ವಾಪಾಸ್ ನೀಡುತ್ತಿದ್ದಾರೆ. ಇದರಿಂದ ಅವರೇ ತಪ್ಪು ಒಪ್ಪಿಕೊಂಡಿದ್ದಾರಲ್ಲ ಎಂದು ಹೇಳಿದ್ದಾರೆ.

ಈ ವಿಡಿಯೋವನ್ನು ಮುಂದಿಟ್ಟು ಬಿಜೆಪಿ ಸಿಎಂ ಸಿದ್ದರಾಮಯ್ಯಗೆ ಅವರಿಗೆ ತಾವು ಹೇಳಿದ ಮಾತುಗಳು ಮರೆತು ಹೋದ ಹಾಗಿದೆ ಎಂದಿದೆ.

ಎರಡು ನಾಲಿಗೆಯ ಬುರುಡೆರಾಮಯ್ಯ !

ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಹೆಸರಿನಲ್ಲಿ ಪಡೆದಿದ್ದ 14 ಸೈಟುಗಳನ್ನು ಹಿಂತಿರುಗಿಸುವ ನಿರ್ಧಾರ ಮಾಡಿದ್ದಾರೆ.

ಸಿದ್ದರಾಮಯ್ಯನವರೇ ನಿಮ್ಮ ಅಂದಿನ ಹೇಳಿಕೆಯನ್ನು ಮತ್ತೆ ನೆನಪಿಸಿಕೊಳ್ಳಿ. ಕದ್ದ ಮಾಲನ್ನು ಹಿಂತಿರುಗಿಸಿದ ಕೂಡಲೇ ಕಳ್ಳ ನಿರಪರಾಧಿ ಆಗಿಬಿಡುತ್ತಾನೆಯೇ?

ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಗಾಗಿ ತಮ್ಮ ಸ್ಥಾನಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಲೇ ಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ