ಕೊವಿಡ್ ಗೆ ಸ್ವಯಂ ಪರೀಕ್ಷೆ ಪ್ರಯೋಗ ಮಾಡುತ್ತಾ ಕೂರಬೇಡಿ

ಶುಕ್ರವಾರ, 7 ಮೇ 2021 (09:02 IST)
ಬೆಂಗಳೂರು: ಇತ್ತೀಚೆಗೆ ಕೊರೋನಾ ಬಂದರೆ ನೀಡಲಾಗುವ ಚಿಕಿತ್ಸೆಗಳ ಬಗ್ಗೆ, ಔಷಧಗಳ ಬಗ್ಗೆ ಆನ್ ಲೈನ್ ಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ದೊರೆಯುತ್ತದೆ.


ಹಾಗಂತ ಕೊರೋನಾ ಸಣ್ಣ ಪ್ರಮಾಣದಲ್ಲಿದೆಯೆಂದು ಆನ್ ಲೈನ್ ನಲ್ಲಿ ಸಿಗುವ ಮಾಹಿತಿಯಂತೆ ಮಾತ್ರೆಗಳನ್ನು ಸೇವಿಸುವುದು ಅಥವಾ ಸ್ವಯಂ ಉಪಚಾರ ಮಾಡುತ್ತಾ ಕೂರುವುದು ಅಪಾಯಕಾರಿ ಎಂದು ತಜ್ಞ ವೈದ್ಯರುಗಳೇ ಎಚ್ಚರಿಸಿದ್ದಾರೆ.

ಸ್ವಯಂ ಉಪಚಾರ ಮಾಡುತ್ತಾ ಕೂರುವುದರಿಂದಲೇ ಕೊವಿಡ್ ಉಲ್ಬಣಗೊಳ್ಳುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಕೊವಿಡ್ ಬಂದ ತಕ್ಷಣವೇ ತಜ್ಞ ವೈದ್ಯರನ್ನು ಭೇಟಿಯಾಗಿ ನಿರ್ಲ್ಯಕ್ಷ ಮಾಡದೇ ಔಷಧ ಪಡೆದುಕೊಳ್ಳಿ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ