ಲೀಫ್ಟ್ ಕೆಟ್ಟು ತಿಂಗಳುಗಳೇ ಕಳೆದ್ರೂ ಡೋಂಟ್ ಕೇರ್

ಭಾನುವಾರ, 30 ಜುಲೈ 2023 (13:41 IST)
ಒಂದ್ಕಡೆ ಹಾಳು ಹಂಪೆಯಂತಾಗಿರುವ ಸರ್ಕಾರೀ ಕಟ್ಟಡ.. ಇನ್ನೊಂದ್ಕಡೆ ಮಹಡಿ ಹತ್ತಲು ಕಷ್ಟಪಡುತ್ತಿರುವ ವೃದ್ಧರು, ಅಂಗವಿಕಲರು. ಇದು ಯಶವಂತಪುರದ ಆರ್ ಟಿಒ ಆಫೀಸ್ ಪರಿಸ್ಥಿತಿ. ಹೌದು ಸಿಲಿಕಾನ್ ಸಿಟಿಯ ಆರ್ ಟಿಒ ಆಫೀಸ್ ಕಟ್ಟಡದ ಲೀಫ್ಟ್ ಕೆಟ್ಟು ನಿಂತು ತಿಂಗಳುಗಳೇ ಕಳೆದಿದೆ. ಈಗಾಗಲೇ ಸಾಕಷ್ಟು ಬಾರಿ ಕಂಪ್ಲೆಟ್ ಕೂಡ ಮಾಡಲಾಗಿದೆ. ಅಷ್ಟಾದ್ರೂ ಇಲ್ಲಿ ಯಾರು ಕ್ಯಾರೇ ಎನ್ನುತ್ತಿಲ್ಲ. ಲಿಫ್ಟ್ ಇಲ್ದೆ ಇಲ್ಲಿನ ಜನರು ಪಡುತ್ತಿದ್ದಾರೆ. ಅಲ್ಲದೇ ಅಲ್ಲಲ್ಲಿ ಮಳೆಯ ನೀರು ಸಂಗ್ರಹವಾಗಿ ಗೋಡೆ ಬಿರುಕು ಬಿಟ್ಟಿದ್ದು, ಕಟ್ಟಡ ಬೀಳುವ ಸ್ಥಿತಿಯಲ್ಲಿದೆ. ಆರ್ ಟಿಒ ಕಚೇರಿ ಬೀಳುವ ಸ್ಥಿತಿಯಲ್ಲಿದೆ.

ಇನ್ನು ಲಿಫ್ಟ್ ಕೆಟ್ಟು ನಿಂತು ೬ ತಿಂಗಳು ಕಳೆದಿದೆ. ಈಗಾಗಲೇ ಸಾಕಷ್ಟು ಬಾರಿ ಕಂಪ್ಲೆಟ್ ಕೂಡ ಮಾಡಲಾಗಿದೆ. ಶಿಂಡ್ಲರ್ ಲಿಫ್ಟ್ ಮತ್ತೆ ಬಿಬಿಎಂಪಿ ಜಗಳಕ್ಕೆ ಜನ ಜೀವನ ಬಲಿಯಾಗ್ತಿದೆ. ಬಿಬಿಎಂಪಿ ಶಿಂಡ್ಲರ್ ಲಿಫ್ಟ್ ಗೆ ೩೫ ಲಕ್ಷ ರೂಪಾಯಿ ಕೊಡಲು ಬಾಕಿ ಇದೆ ಅಂತೆ. ಹಣ ಸಿಕ್ರೆ ನಾವು ಲಿಫ್ಟ್ ಸರಿ ಮಾಡ್ತಿವಿ ಅಂತ ಶಿಂಡ್ಲರ್ ಲಿಫ್ಟ್ ಸಿಬ್ಬಂದಿ ಹೇಳುತ್ತಿದ್ದಾರೆ. ಇತ್ತ ಲಿಫ್ಟ್ ಅಪರೇಟರ್ ಮೇಲೆ ಸಿಟ್ಟಾದ ಸಾರ್ವಜನಿಕರು ಗರಂ ಆಗಿದ್ದಾರೆ. ಆರ್ ಟಿಒ ಆಫೀಸರ್ ನಾರಾಯಣ ಸ್ವಾಮಿ ನಾಯ್ಕ್ ಸಹ ಬಿಬಿಎಂಪಿ‌ ನಡೆಗೆ‌ ಅಸಮಾಧಾನಗೊಂಡಿದ್ದಾರೆ. ಆದ್ರೆ ಇಲ್ಲಿ ನಿತ್ಯ ಜನರು ತಮ್ಮ ನಿತ್ಯ ಕೆಲಸಕ್ಕೆ ಓಡಾಡಲು ನರಕ ಅನುಭವಿಸ್ತಿದ್ದಾರೆ. ಇನ್ನು ಈ ಬಿಲ್ಡಿಂಗ್ ನಲ್ಲೇ ಬೆಂಗಳೂರು ಒನ್ ಇರೋದ್ರಿಂದ ಗೃಹಜ್ಯೋತಿ, ಗೃಹಲಕ್ಷ್ಮಿಗೆ ಬರುವ ಮಹಿಳೆಯರು ಹಾಗೂ ಪೀಚಣಿಗಾಗಿ ಓಡಾಡುವ ವೃದ್ಧರು ಬಾರಿ  ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದ್ರೂ ಕೂಡ ಇದಕ್ಕೂ ನಮಗೂ ಸಂಬಂಧವಿಲ್ಲ ಅಂತ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ ಅಂತ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
 
ಒಂದ್ಕಡೆ ಹಾಳು ಹಂಪೆಯಂತಾಗಿರುವ ಸರ್ಕಾರೀ ಕಟ್ಟಡ.ಇನ್ನೊಂದ್ಕಡೆ ಮಹಡಿ ಹತ್ತಲು ಕಷ್ಟಪಡುತ್ತಿರುವ ವೃದ್ಧರು, ಅಂಗವಿಕಲರು. ಇದು ಯಶವಂತಪುರದ ಆರ್ ಟಿಒ ಆಫೀಸ್ ಪರಿಸ್ಥಿತಿ. ಹೌದು ಸಿಲಿಕಾನ್ ಸಿಟಿಯ ಆರ್ ಟಿಒ ಆಫೀಸ್ ಕಟ್ಟಡದ ಲೀಫ್ಟ್ ಕೆಟ್ಟು ನಿಂತು ತಿಂಗಳುಗಳೇ ಕಳೆದಿದೆ. ಈಗಾಗಲೇ ಸಾಕಷ್ಟು ಬಾರಿ ಕಂಪ್ಲೆಟ್ ಕೂಡ ಮಾಡಲಾಗಿದೆ. ಅಷ್ಟಾದ್ರೂ ಇಲ್ಲಿ ಯಾರು ಕ್ಯಾರೇ ಎನ್ನುತ್ತಿಲ್ಲ. ಲಿಫ್ಟ್ ಇಲ್ದೆ ಇಲ್ಲಿನ ಜನರು ಪಡುತ್ತಿದ್ದಾರೆ. ಅಲ್ಲದೇ ಅಲ್ಲಲ್ಲಿ ಮಳೆಯ ನೀರು ಸಂಗ್ರಹವಾಗಿ ಗೋಡೆ ಬಿರುಕು ಬಿಟ್ಟಿದ್ದು, ಕಟ್ಟಡ ಬೀಳುವ ಸ್ಥಿತಿಯಲ್ಲಿದೆ. ಆರ್ ಟಿಒ ಕಚೇರಿ ಬೀಳುವ ಸ್ಥಿತಿಯಲ್ಲಿದೆ.

ಇನ್ನು ಲಿಫ್ಟ್ ಕೆಟ್ಟು ನಿಂತು ೬ ತಿಂಗಳು ಕಳೆದಿದೆ. ಈಗಾಗಲೇ ಸಾಕಷ್ಟು ಬಾರಿ ಕಂಪ್ಲೆಟ್ ಕೂಡ ಮಾಡಲಾಗಿದೆ. ಶಿಂಡ್ಲರ್ ಲಿಫ್ಟ್ ಮತ್ತೆ ಬಿಬಿಎಂಪಿ ಜಗಳಕ್ಕೆ ಜನ ಜೀವನ ಬಲಿಯಾಗ್ತಿದೆ. ಬಿಬಿಎಂಪಿ ಶಿಂಡ್ಲರ್ ಲಿಫ್ಟ್ ಗೆ ೩೫ ಲಕ್ಷ ರೂಪಾಯಿ ಕೊಡಲು ಬಾಕಿ ಇದೆ ಅಂತೆ. ಹಣ ಸಿಕ್ರೆ ನಾವು ಲಿಫ್ಟ್ ಸರಿ ಮಾಡ್ತಿವಿ ಅಂತ ಶಿಂಡ್ಲರ್ ಲಿಫ್ಟ್ ಸಿಬ್ಬಂದಿ ಹೇಳುತ್ತಿದ್ದಾರೆ. ಇತ್ತ ಲಿಫ್ಟ್ ಅಪರೇಟರ್ ಮೇಲೆ ಸಿಟ್ಟಾದ ಸಾರ್ವಜನಿಕರು ಗರಂ ಆಗಿದ್ದಾರೆ. ಆರ್ ಟಿಒ ಆಫೀಸರ್ ನಾರಾಯಣ ಸ್ವಾಮಿ ನಾಯ್ಕ್ ಸಹ ಬಿಬಿಎಂಪಿ‌ ನಡೆಗೆ‌ ಅಸಮಾಧಾನಗೊಂಡಿದ್ದಾರೆ. ಆದ್ರೆ ಇಲ್ಲಿ ನಿತ್ಯ ಜನರು ತಮ್ಮ ನಿತ್ಯ ಕೆಲಸಕ್ಕೆ ಓಡಾಡಲು ನರಕ ಅನುಭವಿಸ್ತಿದ್ದಾರೆ. ಇನ್ನು ಈ ಬಿಲ್ಡಿಂಗ್ ನಲ್ಲೇ ಬೆಂಗಳೂರು ಒನ್ ಇರೋದ್ರಿಂದ ಗೃಹಜ್ಯೋತಿ, ಗೃಹಲಕ್ಷ್ಮಿಗೆ ಬರುವ ಮಹಿಳೆಯರು ಹಾಗೂ ಪೀಚಣಿಗಾಗಿ ಓಡಾಡುವ ವೃದ್ಧರು ಬಾರಿ  ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದ್ರೂ ಕೂಡ ಇದಕ್ಕೂ ನಮಗೂ ಸಂಬಂಧವಿಲ್ಲ ಅಂತ ಅಧಿಕಾರಿಗಳು ಹಾರಿಕೆ ಉತ್ತರ ನೀಡುತ್ತಿದ್ದಾರೆ ಅಂತ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
 
ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ