ನೈಟ್ ಕರ್ಫ್ಯೂ ತೆರವು-ನಿಷೇಧಾಜ್ಞೆ ಮುಂದುವರಿಕೆ
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ದಕ್ಷಿಣ ಕನ್ನಡ ಜಿಲ್ಲೆ ಉದ್ವಿಗ್ನಗೊಂಡಿತ್ತು.. ಹಂತ ಹಂತವಾಗಿ ಕರಾವಳಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಮುಂಜಾಗ್ರತೆಯಿಂದ ಸೆಕ್ಷನ್ 144 ಸೇರಿದಂತೆ ನೈಟ್ ಕರ್ಫೂವನ್ನು ಹೇರಲಾಗಿತ್ತು. ಇದೀಗ ಪ್ರವೀಣ್ ನೆಟ್ಟಾರು ಹತ್ಯೆಗೈದ ಕೊಲೆ ಆರೋಪಿಗಳನ್ನು ಬಂಧಿಸಲಾಗಿದ್ದು, ಮಂಗಳೂರು ಸಹಜ ಸ್ಥಿತಿಗೆ ಮರಳುತ್ತಿದೆ. ಅದ್ರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ತೆರವು ಮಾಡಲಾಗಿದೆ. ಇಂದಿನಿಂದಲೇ ಆದೇಶ ಜಾರಿಗೆ ಬರುವಂತೆ ಜಿಲ್ಲಾಧಿಕಾರಿ ರಾಜೇಂದ್ರ ಸೂಚನೆ ನೀಡಿದ್ದಾರೆ. ಆದರೆ ಜಿಲ್ಲೆಯಲ್ಲಿ ಆಗಸ್ಟ್ 14ರವರೆಗೆ ಸೆಕ್ಷನ್ 144 ಮುಂದುವರಿಸೋದಾಗಿ ತಿಳಿಸಿದ್ದಾರೆ.