ವಿಶ್ವಾಸಮತ ಯಾಚನೆಗೆ ಹೋಗೋದಿಲ್ಲ : BSP ಶಾಸಕ ಫುಲ್ ಸೈಲೆಂಟ್

ಸೋಮವಾರ, 22 ಜುಲೈ 2019 (17:26 IST)
ವಿಧಾನಸಭೆ ಕಲಾಪದಲ್ಲಿ ನಡೆಯುವ ವಿಶ್ವಾಸ ಮತ ಯಾಚನೆಗೆ ನಾನು ಹೋಗುವುದಿಲ್ಲ. ಹೀಗಂತ ಬಿಎಸ್ ಪಿ ಶಾಸಕ ಹೇಳಿದ್ದಾರೆ.

ಬಿ ಎಸ್ ಪಿ ಶಾಸಕ ಎನ್. ಮಹೇಶ್ ಈ ರೀತಿ ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದ ವಿಶ್ವಾಸಮತ ಯಾಚನೆ ವೇಳೆ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ತಟಸ್ಥರಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಪಕ್ಷದ ವರಿಷ್ಠರಿಂದ ಸೂಚನೆ ಬಂದಿರುವ ಹಿನ್ನೆಲೆ ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದ್ರು.

ವಿಶ್ವಾಸ ಮತ ಯಾಚನೆ ವೇಳೆ ತಟಸ್ಥರಾಗುವಂತೆ ಶಾಸಕ ಎನ್.ಮಹೇಶ್ ಗೆ  ಮಾಯಾವತಿಯಿಂದ ಸೂಚನೆ ಬಂದಿದೆ. ಈ ಹಿನ್ನಲೆಯಲ್ಲೆ ನನ್ನ ಖಾಸಗಿ ಕೆಲಸದಿಂದ ಎರಡು ದಿನ ಕಲಾಪಕ್ಕೆ ಭಾಗವಹಿಸಲಿಲ್ಲ.

ಇನ್ನೆರಡು ದಿನ ನಾನು ಅಸೆಂಬ್ಲಿಗೆ ಹೋಗುವುದಿಲ್ಲ. ನನ್ನ ಕ್ಷೇತ್ರದಲ್ಲಿದ್ದು ಜನರ ಕೆಲಸ ಮಾಡುತ್ತೇನೆ. ಹೀಗಂತ ಕೊಳ್ಳೇಗಾಲದಲ್ಲಿ ಬಿಎಸ್ಪಿ ಶಾಸಕ ಎನ್.ಮಹೇಶ್ ಹೇಳಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ