ಕಾಂಗ್ರೆಸ್ ಪಕ್ಷದ ಡಿನ್ನರ್ ಪಾಲಿಟಿಕ್ಸ್‌ನ winner ಯಾರೋ ಗೊತ್ತಿಲ್ಲ: ಆರ್ ಅಶೋಕ್ ವ್ಯಂಗ್ಯ

Sampriya

ಮಂಗಳವಾರ, 7 ಜನವರಿ 2025 (17:28 IST)
ಬೆಂಗಳೂರು: ಕಾಂಗ್ರೆಸ್‌ನಲ್ಲಿ ಈಗ ಡಿನ್ನರ್‌ ಪಾಲಿಟಿಕ್ಸ್‌ ಜೋರಾಗಿದೆ. ಡಿಕೆಶಿ ಅನುಪಸ್ಥಿತಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ನಿವಾಸದಲ್ಲಿ ಡಿನ್ನರ್ ಪಾರ್ಟಿ ಆಯೋಜಿಸಿದ ಬೆನ್ನಲ್ಳೇ ಇದೀಗ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಜೌತಣಕೂಟ ಆಯೋಜನೆ ಮಾಡಿದ್ದು ಹೊಸ ಚರ್ಚೆಗೆ ಕಾರಣವಾಗಿದೆ.  

ಡಿನ್ನರ್ ಪಾರ್ಟಿ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸದ್ದು ಗದ್ದಲಕ್ಕೆ ಕಾರಣವಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕ ಆರ್‌ ಅಶೋಕ್ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ ಕಾಂಗ್ರೆಸ್ ಸರ್ಕಾರದ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.

ಸತೀಶ್ ಜಾರಕಿಹೊಳಿ ಅವರ ಡಿನ್ನರ್ ಮೀಟಿಂಗ್ ಆಯ್ತು ಈಗ ಡಾ.ಪರಮೇಶ್ವರ್ ಅವರ ಸರದಿ!

ಒದ್ದು ಅಧಿಕಾರ ಕಿತ್ತುಕೊಳ್ಳುತ್ತೇನೆ ಎಂದು ಸದನದಲ್ಲಿ ಡಿ.ಕೆ.ಶಿವಕುಮಾರ್ ಅವರು ಅಬ್ಬರಿಸಿದಾಗಿನಿಂದ
ಕೆರಳಿ ಕೆಂಡವಾದಂತಿರುವ ಅವರ ವಿರೋಧಿ ಬಣ, ಅದು ಹೇಗೆ ಒದ್ದು ಕಿತ್ತುಕೊಳ್ಳುತ್ತಾರೋ ನೋಡೇ ಬಿಡೋಣ ಎಂದು ಸವಾಲು ಹಾಕಿದಂತೆ ಡಿನ್ನರ್ ಮೀಟಿಂಗ್ ಗಳ ಮೇಲೆ ಮೀಟಿಂಗ್ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ ಕಾಂಗ್ರೆಸ್‌ ಪಕ್ಷದ ಡಿನ್ನರ್ ಪಾಲಿಟಿಕ್ಸ್ ನ winner ಯಾರೋ ಗೊತ್ತಿಲ್ಲ, ಆದರೆ loser ಮಾತ್ರ ಕರ್ನಾಟಕ. ಯಾರು ಯಾರಿಗೆ ಒದೆಯುತ್ತಾರೋ, ಯಾರು ಯಾರ ಕೈಯಲ್ಲಿ ಒದ್ದಿಸಿಕೊಳ್ಳುತ್ತಾರೋ ಗೊತ್ತಿಲ್ಲ, ಒಟ್ಟಿನಲ್ಲಿ ಅಭಿವೃದ್ಧಿ ಇಲ್ಲದೆ ಸೊರಗುತ್ತಿರುವ ಕನ್ನಡಿಗರ ಒದ್ದಾಟ ಮಾತ್ರ ತಪ್ಪಿದ್ದಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ