ಬೆಂಗಳೂರು: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ತಂಡದ ವಿರುದ್ಧ ಸ್ಯಾಂಡಲ್‌ವುಡ್ ನಟಿ ರಮ್ಯಾ ಕಾನೂನು ಕ್ರಮ ಕೈಗೊಂಡಿದ್ದರು. ಈ ಪ್ರಕರಣ ಸಂಬಂಧ ಇಂದು ಕೋರ್ಟ್‌ನಲ್ಲಿ ವಿಚಾರಣೆ ಭಾಗಿಯಾಗಲು ನಟಿ ರಮ್ಯಾ ಕೋರ್ಟ್‌ಗೆ ಹಾಜರಾದರು.
ಈ ವೇಳೆ ಮಾಧ್ಯಮದವರ ಬಳಿ ನೀವೇನು ಇಲ್ಲಿದ್ದೀರಿ ಎಂದು ರಮ್ಯಾ ಕ್ಯೂಟ್ ಆಗಿ ಪ್ರಶ್ನೆ ಮಾಡಿದ್ದಾರೆ. ನಿಮ್ಮ ಕೇಸು ವಿಚಾರಣೆ ಇರುವ ಕಾರಣ ಇಲ್ಲಿದ್ದೇವೆ ಎಂದಿದ್ದಕ್ಕೆ ಅಚ್ಚರಿಯಲ್ಲೇ ರಮ್ಯಾ ಕೋರ್ಟ್ ಆವರಣದ ಒಳಗಡೆ ಹೋದರು.
ಏನಿದು ಪ್ರಕರಣ: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ತಮ್ಮ ವಿಡಿಯೋವನ್ನು ಅನುಮತಿಯಿಲ್ಲದೆ ಬಳಸಿದ್ದಾರೆ ಎಂದು ರಮ್ಯಾ ಚಿತ್ರತಂಡದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ವಿಡಿಯೋ ತೆಗೆಯಬೇಕು ಇಲ್ಲದಿದ್ರೆ ₹1ಕೋಟಿ ಪರಿಹಾರ ನೀಡಬೇಕೆಂದಿದ್ದರು.
ಇದೀಗ ಈ ಸಂಬಂಧ ಇಂದು ವಿಚಾರಣೆ ನಡೆಯಲಿದ್ದು, ಯಾರ ಪಾಲಿಗೆ ಜಯ ಸಿಗಲಿದೆ ಎಂದು ಕಾದುನೋಡಬೇಕಿದೆ.