ಸರ್ಕಾರಿ ಆಸ್ಪತ್ರೆಗಳ ಬಿಲ್ ಕಟ್ಟುವಷ್ಟು ಸರ್ಕಾರದ ಬೊಕ್ಕಸದಲ್ಲಿ ದುಡ್ಡು ಇಲ್ವಾ..!

ಗುರುವಾರ, 2 ಫೆಬ್ರವರಿ 2023 (15:30 IST)
ರಾಜ್ಯದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತೇವೆ ಎನ್ನುತ್ತಾರೆ . ಆಸ್ಪತ್ರೆಗಳ ನಿರ್ವಹಣೆಗೆ ಎಂದು ಕೋಟಿ ಕೋಟಿ ದುಡ್ಡು ಮೀಸಲಿಟ್ಟಿದ್ದಾರೆ ಆದರೆ ಆಸ್ಪತ್ರೆಗಳ ನಿರ್ವಹಣೆ ಮಾಡುವುದರಲ್ಲಿ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಬೆಂಗಳೂರು ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆ ಕೆಸಿ ಜನರಲ್ 
 
ಹೌದು ಮಲ್ಲೇಶ್ವರಂನಲ್ಲಿ ಇರುವ ಕೆಸಿ ಜನರಲ್ ಆಸ್ಪತ್ರೆಗೆ ಬೆಸ್ಕಾಂ  ಪವರ್ ಕಟ್ ಮಾಡುವ ಶಾಕಿಂಗ್ ನೋಟಿಸ್ ನೀಡಿದೆ. ಕಳೆದ 3-4 ತಿಂಗಳಿಂದ ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದೆ. 38 ಲಕ್ಷ ರೂ. ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದ್ದು, ಸರ್ಕಾರಿ ಆಸ್ಪತ್ರೆಗಳ ಕರೆಂಟ್ ಬಿಲ್ ಕಟ್ಟದಷ್ಟು ಸರ್ಕಾರದ ಬೊಕ್ಕಸ ಖಾಲಿಯಾಗಿದೆಯಾ ಎಂಬ ಪ್ರಶ್ನೆ ಮೂಡಿದೆ. 
 
 ಬಡ ಜನರ ಆರೋಗ್ಯವನ್ನು ಚೇತರಿಸಿ ಅವರ ಬದುಕಿಗೆ ಬೆಳಕು ನೀಡಾಬೇಕಿದ್ದ ಸರ್ಕಾರಿ ಆಸ್ಪತ್ರೆಗಳೆ ಕತ್ತಲಾಗುತ್ತಿರುವುದು ವಿಪರ್ಯಾಸವೇ ಸರಿ, ಇನ್ನೂ ಬೆಸ್ಕಾಂ ಸರ್ಕಾರಿ ಆಸ್ಪತ್ರೆ ನೋಟಿಸುಗಳನ್ನ ನೀಡುತ್ತಿರುವುದು ಇದೆ ಮೊದಲೆನು ಅಲ್ಲ ಕಳೆದ 5  ತಿಂಗಳುಗಳಿಂದ ಸತತವಾಗಿ ನೋಟಿಸುಗಳನ್ನ ಕಳಿಸಿತ್ತು ಆದರೆ ಇನ್ನೂ ಈ ನೋಟಿಸುಗಳಿಗೆ ರೆಸ್ಪಾನ್ಸ್ ಸಿಗ್ತಾನೇ ಇಲ್ಲಾ , ಒಂದೆಡೆ ಸರ್ಕಾರಿ ಆಸ್ಪತ್ರೆ ಪವರ್ ಕಟ್ ಮಾಡಿದ್ರೆ ಜನ ಜೀವನ ಅಸ್ತವ್ಯಸ್ತವಾಗುತ್ತೆ ಅಂತಾ ಬೆಸ್ಕಾಂ ಕೂಡ ನೋಟಿಸ್ ಕಳುಹಿಸಿ ಸುಮ್ಮನಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ