ಎವರೆಸ್ಟ್ ಚಿಕನ್ ಮಸಾಲಾ ಬಳಸಬೇಡಿ, ಮನೆಯಲ್ಲಿದ್ದರೆ ವಾಪಾಸ್ ನೀಡಿ: ಆಹಾರ ಸುರಕ್ಷತಾ ಅಧಿಕಾರಿ
ಮಸಲಾ ಪದಾರ್ಥದಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಕೇವಲ ಶೇ.0.01ರಷ್ಟು ಇರಬೇಕು. ಆದರೆ ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಶೇ.3.93ರಷ್ಟು ಪ್ರಮಾಣದಲ್ಲಿದೆ. ಇಷ್ಟೊಂದು ಪ್ರಮಾಣದಲ್ಲಿ ಎಥಿಲಿನ್ ಆಕ್ಸೈಡ್ ಬಳಕೆ ಹಾನಿಕಾರಕ. ಇದು ಆರೋಗ್ಯದ ಮೇಲೆ ಪರಿಣಾಮ ಆಗಿಯೇ ಆಗುತ್ತದೆ ಎಂದು ಉತ್ತರ ಕನ್ನಡ ಜಿಲ್ಲೆ ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ್ ಹೇಳಿದರು.
ಈ ಸಂಬಂಧ ಈಗಾಗಲೇ ಎವರೆಸ್ಟ್ ಮಸಾಲಾ ಕಂಪನಿಗೆ ನೋಟಿಸ್ ನೀಡಿ ಚಿಕನ್ ಮಸಾಲಾ ಪಾಕೆಟ್ ಸರಬರಾಜು ನಿಲ್ಲಿಸಬೇಕೆಂದು ಹೇಳಲಾಗಿದೆ. ಅದಲ್ಲದೆ ಅಂಗಡಿಗಳಿಗೆ ಪೊರೈಸಿದ ಮಸಾಲೆಯನ್ನು ವಾಪಸ್ಸು ಪಡೆಯುವಂತೆ ಉಲ್ಲೇಖಿಸಲಾಗಿದೆ.