ನವದೆಹಲಿ: ಭಾರತೀಯ ಮೂಲದ ಮಸಲಾ ವಸ್ತುಗಳ ತಯಾರಕರಾದ ಎವರೆಸ್ಟ್ ಉತ್ಪನ್ನಗಳನ್ನು ಹಾಂಗ್ ಕಾಂಗ್ ಇತ್ತೀಚೆಗೆ ಹಾನಿಕಾರಕ ಅಂಶವಿದೆ ಎಂಬ ಕಾರಣಕ್ಕೆ ನಿಷೇಧಿಸಿತ್ತು. ಇದರ ಬೆನ್ನಲ್ಲೇ ಈಗ ಭಾರತದಲ್ಲೂ ಈ ಉತ್ಪನ್ನಗಳು ನಿಷೇಧದ ಭೀತಿಯಲ್ಲಿದೆ.
ಎವರೆಸ್ಟ್ ಮಸಾಲಾದಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆ ಎಂದು ಪತ್ತೆಯಾದ ಹಿನ್ನಲೆಯಲ್ಲಿ ಹಾಂಗ್ ಕಾಂಗ್ ನ ಭಾರತದ ಈ ಉತ್ಪನ್ನಕ್ಕೆ ನಿಷೇಧ ಹೇರಿತ್ತು. ಇದರ ಬೆನ್ನಲ್ಲೇ ಭಾರತವೂ ಎಚ್ಚೆತ್ತುಕೊಂಡಿದೆ. ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗ (ಎಫ್ಎಸ್ಎಸ್ಎಐ) ಎವರೆಸ್ಟ್ ಮತ್ತು ಎಂಡಿಎಚ್ ಮಸಾಲ ಉತ್ಪನ್ನಗಳ ಗುಣಮಟ್ಟ ಪರೀಕ್ಷೆಗೆ ಆದೇಶಿಸಿದೆ.
ಈ ಎರಡೂ ಉತ್ಪನ್ನಗಳಲ್ಲೂ ಕ್ಯಾನ್ಸರ್ ಕಾರಕ ಅಂಶವಿದೆ ಎಂಬ ಆರೋಪಗಳ ಹಿನ್ನಲೆಯಲ್ಲಿ ಎಫ್ಎಸ್ಎಸ್ಎಐ ಈ ಉತ್ಪನ್ನಗಳಿಗೆ ನಿಷೇಧ ಹೇರುವ ನಿಟ್ಟಿನಲ್ಲಿ ಪರೀಕ್ಷೆಗೆ ಮುಂದಾಗಿದೆ. ಹಾಂಗ್ ಕಾಂಗ್ ಆಹಾರ ಗುಣಮಟ್ಟ ವಿಭಾಗ ಎಂಡಿಎಚ್ ನ ಸಾಂಬಾರ್ ಮಸಾಲ, ಮದ್ರಾಸ್ ಕರಿ ಮಸಾಲ ಮತ್ತು ಕರಿ ಪೌಡರ್ ಹಾಗೂ ಎವರೆಸ್ಟ್ ಬ್ರ್ಯಾಂಡ್ ನ ಫಿಶ್ ಕರಿ ಮಸಾಲವನ್ನು ಪರೀಕ್ಷೆಗೆ ಒಳಪಡಿಸಿತ್ತು. ಈ ವೇಳೆ ಕ್ಯಾನ್ಸರ್ ಕಾರಕವಾದ ಕಾರ್ಸಿನೋಜೆನಿಕ್ ಪೆಸ್ಟಿಸೈಡ್ ಇಥೆಲಿನ್ ಆಕ್ಸೈಡ್ ಪತ್ತೆಯಾಗಿತ್ತು ಎಂದು ತಿಳಿದುಬಂದಿತ್ತು.
ಇದೇ ಕಾರಣಕ್ಕೆ ಈಗ ಭಾರತದ ಆಹಾರ ಗುಣಮಟ್ಟ ವಿಭಾಗವೂ ಇವುಗಳನ್ನು ಪರೀಕ್ಷೆಗೊಳಪಡಿಸಲು ತೀರ್ಮಾನಿಸಿದೆ. ಒಂದು ವೇಳೆ ಪರೀಕ್ಷೆಯಲ್ಲಿ ಹಾನಿಕಾರಕ ಅಂಶ ದೃಢಪಟ್ಟರೆ ಭಾರತದಲ್ಲೂ ಈ ಎರಡು ಉತ್ಪನ್ನಗಳಿಗೆ ನಿಷೇಧ ಹೇರಲಾಗುತ್ತದೆ.
ಅರಸೀಕೆರೆ: ಸಿಎಂ ಸಿದ್ದರಾಮಯ್ಯ ಸರ್ಕಾರದ ಮಹಿಳೆಯರಿಗೆ ಉಚಿತ ಬಸ್ ಟಿಕೆಟ್ ಘೋಷಣೆ ಕೆಲವರಿಗೆ ಅನುಕೂಲವಾದರೆ ಮತ್ತೆ ಕೆಲವರು ಅದನ್ನು ಟೀಕಿಸಿದ್ದೂ ಇದೆ. ಇದೀಗ ವಿದ್ಯಾರ್ಥಿನಿಯೊಬ್ಬರು ಸಿದ್ದರಾಮಯ್ಯಗೆ ವಿಶಿಷ್ಟವಾಗಿ ಈ ಕೊಡುಗೆ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.