100ರ ಅಸುಪಾಸಿನಲ್ಲಿರುವ ಕೆಆರ್‌ಎಸ್‌ ಡ್ಯಾಂನ ಸ್ಥಿತಿಗತಿ ವಿವರಿಸಿದ ಚೆಲುವರಾಯಸ್ವಾಮಿ

Sampriya

ಮಂಗಳವಾರ, 13 ಆಗಸ್ಟ್ 2024 (15:00 IST)
Photo Courtesy X
ಮಂಡ್ಯ: ತುಂಗಭದ್ರಾ ಡ್ಯಾಂನ ಗೇಟ್ ಮುರಿದು ಅಪಾರ ಪ್ರಮಾಣದ ನೀರು ಹೊರಬರುತ್ತಿರುವ ಬೆನ್ನಲ್ಲೇ ರಾಜ್ಯದ ಎಲ್ಲ ಡ್ಯಾಂಗ ಸ್ಥಿತಿಗತಿ ತಿಳಿಯಲು ಸಮಿತಿಯನ್ನು ರಚನೆ ಮಾಡಲಾಗಿದೆ.

ಈ ಸಂಬಂದ ಸಚಿವ ಚೆಲುವರಾಯಸ್ವಾಮಿ ಅವರು ಪ್ರತಿಕ್ರಿಯಿಸಿ, 100 ವರ್ಷಗಳು ಸಮೀಪಿಸುತ್ತಿರುವ ಹಳೆ ಮೈಸೂರು ಭಾಗದ ಜೀವನಾಡಿ ಕೆಆರ್‌ಎಸ್ ಅಣೆಕಟ್ಟು ಸುಭದ್ರವಾಗಿದ್ದು, ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಈಗಾಗಲೇ  ಕೆಆರ್‌ಎಸ್ ಡ್ಯಾಂ ವಿಚಾರವಾಗಿ ಒಂದು ಸಮಿತಿ ಮಾಡಿದ್ದು, ಆ ಸಮಿತಿ ಈಗಾಗಲೇ ನಮಗೆ ವರದಿ ನೀಡಿದೆ. 100 ವರ್ಷ ಸಮೀಪಿಸುತ್ತಿರುವ ಕೆಆರ್‌ಎಸ್ ಡ್ಯಾಂ ಸುಭದ್ರ ಸ್ಥಿತಿಯಲ್ಲಿದ್ದು, ರೈತರು ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.

ಟಿಬಿ ಡ್ಯಾಂನ ಕ್ರಸ್ಟ್ ಗೇಟ್ ಕಟ್ ವಿಚಾರವಾಗಿ ರಾಜಕೀಯ ಮಾಡುವುದು ಸರಿಯಲ್ಲ. ಕಾಮಾಲೆ ಕಣ್ಣಿನವರಿಗೆ ಕಾಣೋದೆಲ್ಲ ಹಳದಿ ಅಂತಾರಲ್ಲ. ಬಿಜೆಪಿಯವರಿಗೆ ದೇಶವೆಲ್ಲ ಹಳದಿಯಾಗಿ ಕಾಣುತ್ತಿದೆ. ಇದು ರಾಜಕೀಯ ಮಾಡುವ ಸಂದರ್ಭವಲ್ಲ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ