ತುಂಗಭದ್ರಾ ಡ್ಯಾಂನ ಪರಿಸ್ಥಿತಿ ಪರಶೀಲನೆಗೆ ಹೆಲಿಕಾಫ್ಟರ್ ಹತ್ತಿದ ಡಿಸಿಎಂ ಶಿವಕುಮಾರ್

Sampriya

ಭಾನುವಾರ, 11 ಆಗಸ್ಟ್ 2024 (12:50 IST)
Photo Courtesy X
ವಿಜಯನಗರ: ತುಂಗಭದ್ರಾ ಡ್ಯಾಂನ 19ನೇ ಗೇಟ್ ಮುರಿದಿದ್ದು, ಅಪಾರ ಪ್ರಮಾಣದ ನೀರು ನದಿಪಾತ್ರಕ್ಕೆ ಹರಿದು ಹೋಗುತ್ತಿರುವ ಸಂಬಂಧ ಪರಿಶೀಲನೆ ನಡೆಸಲು ಡಿಕೆ ಶಿವಕುಮಾರ್ ಅವರು ಸ್ಥಳಕ್ಕೆ ಆಗಮಿಸಿದ್ದಾರೆ.

ಬೆಂಗಳೂರಿಂದ ಹೆಲಿಕಾಪ್ಟಾರ್‌ನಲ್ಲಿ ವಿಜಯನಗರದ ಹೊಸಪೇಟೆಗೆ ಆಗಮಿಸುವ ಡಿಕೆ ಶಿವಕುಮಾರ್ ನಂತರ ರಸ್ತೆ ಮಾರ್ಗದ ಮೂಲಕ ಜಲಾಶಯಕ್ಕೆ ಭೇಟಿ ನೀಡಲಿದ್ದಾರೆ.

ನಂತರ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ.ಇನ್ನೂ ಸಚಿವರ ಜತೆಗೆ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಬರಲಿದ್ದಾರೆ. ತುಂಗಭದ್ರಾ ಮಂಡಳಿಯ ಮೂಲಗಳ ಪ್ರಕಾರ ಹೈದರಾಬಾದ್‌ ಮತ್ತು ಚೆನ್ನೈಗಳಿಂದಲೂ ನೀರಾವರಿ ತಜ್ಞರು, ಎಂಜಿನಿಯರ್‌ಗಳು ಹೊರಟಿದ್ದಾರೆಂಬ ಮಾಹಿತಿಯಿದೆ.

ಡ್ಯಾಂಗೆ ಹಾನಿ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ತುಂಗಭದ್ರಾ ಕಾಡ ಅಧ್ಯಕ್ಷ ಹಸನ್ ಸಾಬ್ ದೋಟಿಹಾಳ, ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ ಮುರಿದಿರುವುದರಿಂದ ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ನದಿಗೆ ಹರಿಯುತ್ತಿದೆ. ಇದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಡ್ಯಾಮ್ ಗೇಟ್ ನೀಲನಕ್ಷೆ ನೀರಾವರಿ ಇಲಾಖೆಯ ಅಧಿಕಾರಿಗಳ ಬಳಿ ಇದ್ದು, ಅದರ ಪುನರ್ ನಿರ್ಮಾಣಕ್ಕೆ ಆದೇಶ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ