ಇನ್ಮುಂದೆ ಭರ್ತಿಯಾಗಿರುವ ತುಂಗಭದ್ರೆ ಬಳಿ ಸೆಲ್ಫಿಗೆ ಫೋಸ್ ಕೊಡುವ ಹಾಗಿಲ್ಲ

Sampriya

ಭಾನುವಾರ, 11 ಆಗಸ್ಟ್ 2024 (10:02 IST)
Photo Courtesy X
ಹೊಸಪೇಟೆ:  ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಮುರಿದು  ನದಿಗೆ ಸದ್ಯ 1 ಲಕ್ಷ ಕ್ಯುಸೆಕ್‌ನಷ್ಟು ನೀರನ್ನು ಹೋಗುತ್ತಿರುವ ಕಾರಣ ಜಲಾಶಯಕ್ಕೆ ಸಾರ್ವಜನಿಕೆ ಪ್ರವೇಶ ನಿರ್ಬಂಧ ವಿಧಿಸಲಾಗಿದೆ.

ಕಳೆದ ಎರಡು ವಾರ ನಿರಂತರ ಸುರಿದ ಮಳೆಯಿಂದಾಗಿ ಎರಡು ವರ್ಷಗಳ ಬಳಿಕ ಆಣೆಕಟ್ಟು ಭರ್ತಿಯಾಗಿತ್ತು.  ಇನ್ನೂ ಇದನ್ನು ನೋಡಲು ವಾರಾಂತ್ಯದ ದಿನಗಳಲ್ಲಿ ತಂಡೋಪ ತಂಡವಾಗಿ ಜನ ಪ್ರತಿವಾರವೂ ಬರುತ್ತಿದ್ದರು. ಈ ವೇಳೆ ಸೆಲ್ಫಿಗೆ ಫೋಸ್ ಕೊಟ್ಟು ಖುಷಿ ಪಡುತ್ತಿದ್ದರು.

ಸೇತುವೆ ಮೇಲೆ ಅತಿ ಗಣ್ಯ ವ್ಯಕ್ತಿಗಳು ಮತ್ತು ಅಧಿಕಾರಿಗಳನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಇದೀಗ ನಿರ್ಬಂಧ ಹೇರಲಾಗಿದೆ.

ಇನ್ನೂ ಮಳೆಯಾಗುತ್ತಿರುವ ಕಾರಣ ನೀರನ್ನು ಬಿಡುಗಡೆ ಮಾಡುವ ಪ್ರಮಾಣದಲ್ಲೂ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ನದಿ ಪಾತ್ರದ ಜನರು ಎಚ್ಚರದಿಂದ ಇರಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಸೂಚಿಸಿದ್ದಾರೆ.

ಶಾಸಕ ಭೇಟಿ: ವಿಜಯನಗರ ಕ್ಷೇತ್ರದ ಶಾಸಕ ಎಚ್.ಆರ್.ಗವಿಯಪ್ಪ ಅವರು ಭಾನುವಾರ ನಸುಕಿನಲ್ಲೇ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ