ಈ ಸಂಖ್ಯೆಯ ಕರೆಗಳನ್ನು ಸ್ವೀಕರಿಸಿದರೇ ಸಾವು ಖಚಿತವಂತೆ?

ಸೋಮವಾರ, 26 ಡಿಸೆಂಬರ್ 2016 (16:18 IST)
ಮಧ್ಯರಾತ್ರಿ 12 ಗಂಟೆಯ ನಂತರ ಒಂದು ಸಂಖ್ಯೆಯಿಂದ ಕರೆ ಬರುತ್ತದೆ. ಆ, ಕರೆ ಸ್ವೀಕರಿಸಿದರೆ ನೀವು ಸತ್ತು ಹೋಗುತ್ತೀರಾ. ಹೀಗೊಂದು ಸುಳ್ಳು ಸಂದೇಶ ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ. ಬಳಕೆದಾರರಲಿ ಆತಂಕ ಶುರುವಾಗಿದೆ.
ವಾಟ್ಸಪ್ ಜಾಲತಾಣಗಳಲ್ಲಿ ಇಂತಹ ಸುದ್ದಿಯ ಜೊತೆಗೆ ಆಡಿಯೋ ಸಹ ಇದ್ದು, ಕೆಲದಿನಗಳಿಂದ ತುಮಕೂರು ನಗರಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. 
 
ನನ್ನ ಹೆಸರು ಸುಚಿ. ಈಗ ಬಂದಿರುವ ಸುದ್ದಿಯೆಂದರೆ, ಮಧ್ಯ ರಾತ್ರಿ 77788889999 ಸಂಖ್ಯೆಯಿಂದ ಕರೆ ಬರುತ್ತದೆ. ಈ ಕರೆಯನ್ನು ಸ್ವೀಕರಿಸಿಬೇಡಿ. ಏಕೆಂದರೆ ಈ ಸಂಖ್ಯೆ ಮೂಲಕ ವೈರಸ್ ರವಾನೆಯಾಗುತ್ತಿದೆ. ಇಂತಹ ಕರೆಗಳನ್ನು ಸ್ವೀಕರಿಸಿದರೆ ಸಾಯುತ್ತಾರಂತೆ ಹೆದರಿಸಲಾಗುತ್ತಿದೆ ಎಂದು ಆಡಿಯೋದಲ್ಲಿ ಹೇಳಲಾಗಿದೆ. 
 
ಬಳಕೆದಾರರೇ ಹೆದರಬೇಕಿಲ್ಲ. ಇಂತಹ ಕರೆಗಳನ್ನು ಸ್ವೀಕರಿಸುವ ಮೂಲಕ ಯಾವ ತೊಂದರೆಯೂ ಆಗುವುದಿಲ್ಲ. ಯಾರೋ ಕಿಡಿಗೇಡಿಗಳು ಇಂತಹ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ