ಅಷ್ಟೇ ಅಲ್ಲದೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹೋದರ. ಹೀಗಾಗಿ ಕಾಂಗ್ರೆಸ್ ಗೆ ಇದು ಪ್ರತಿಷ್ಠೆಯ ಕಣ. ಇವರ ವಿರುದ್ಧ ಇದೇ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸಿರುವ ಹೃದ್ರೋಗ ತಜ್ಞ, ಸಮಾಜ ಸೇವಕ ಡಾ ಸಿಎನ್ ಮಂಜುನಾಥ್ ಸ್ಪರ್ಧಿಸಿದ್ದಾರೆ.
ಕಳಂಕ ರಹಿತರಾಗಿರುವ ಮಂಜುನಾಥ್ ಗೆ ಸಮಾಜದಲ್ಲಿ ಒಳ್ಳೆಯ ಹೆಸರಿದೆ. ಹೀಗಾಗಿ ಇಬ್ಬರ ನಡುವೆ ಯಾರು ಗೆಲ್ಲುತ್ತಾರೆ ಎಂಬುದು ಕುತೂಹಲವಾಗಿದೆ. ಈ ನಡುವೆ ಸೋಷಿಯಲ್ ಮೀಡಿಯಾ ಸಮೀಕ್ಷೆಗಳು ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶ್ ವಿರುದ್ಧ ಮಂಜುನಾಥ್ 40 ಸಾವಿರ ಮತಗಳಿಂದ ಗೆಲ್ಲುತ್ತಾರೆ ಎಂಬ ಸುದ್ದಿ ಹರಿದಾಡಿದೆ. ಜೂನ್ 4 ಫಲಿತಾಂಶ ದಿನಕ್ಕೆ ಕ್ಷಣಗಣನೆ ಶುರುವಾಗಿದ್ದು, ಆ ದಿನ ಎಲ್ಲಾ ಕುತೂಹಲಕ್ಕೆ ತೆರೆ ಬೀಳಲಿದೆ.