ಮದ್ದೂರಿನಲ್ಲಿ ಗಣೇಶ ಗಲಾಟೆ: ಸಣ್ಣ ಘಟನೆ, ಕ್ರಮ ಕೈಗೊಂಡಿದ್ದೀವಿ ಎಂದ ಗೃಹಸಚಿವ ಪರಮೇಶ್ವರ್

Krishnaveni K

ಸೋಮವಾರ, 8 ಸೆಪ್ಟಂಬರ್ 2025 (12:37 IST)
ಮಂಡ್ಯ: ಗಣೇಶ ಮೆರವಣಿಗೆ ಮೇಲೆ ಮಂಡ್ಯದಲ್ಲಿ ನಡೆದ ಗಲಾಟೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗೃಹಸಚಿವ ಡಾ ಜಿ ಪರಮೇಶ್ವರ್ ಅದೊಂದು ಸಣ್ಣ ಘಟನೆ, ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ.

ಗಣೇಶ ಮೆರವಣಿಗೆ ವೇಳೆ ನಾಲ್ಕು ಕಡೆ ಕಲ್ಲು ತೂರಾಟ, ಘರ್ಷಣೆಗಳಾದ ವರದಿಗಳಾಗಿವೆ. ಮದ್ದೂರಿನಲ್ಲಿ ಗಲಾಟೆ ಬಳಿಕ ಕಲ್ಲು ತೂರಾಟದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಹಿಂದೂಗಳ ವಿರುದ್ಧ ಲಾಠಿ ಚಾರ್ಜ್ ಮಾಡಲಾಗಿದೆ. ಇದು ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನು, ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗೃಹಸಚಿವ ಪರಮೇಶ್ವರ್ ಯಾರು ಗಲಾಟೆ ಮಾಡಿದ್ದಾರೋ ಅವರನ್ನು ಅರೆಸ್ಟ್ ಮಾಡಿದ್ದಾರೆ. ಏನೂ ತೊಂದರೆಯಿಲ್ಲ. ಸಣ್ಣ ಪುಟ್ಟ ಘಟನೆಗಳಾಗಿವೆ. ಯಾರು ಗಲಾಟೆ ಮಾಡಿದ್ದಾರೆ ಅವರನ್ನು ಬಂಧಿಸಲಾಗಿದೆ ಎಂದಿದ್ದಾರೆ.

ಯಾವುದೇ ಗಲಾಟೆಗಳಾಗದಂತೆ ಸೂಕ್ತ ಕ್ರಮ ಕೈಗೊಂಡಿದ್ದೆವು. ಸೂಕ್ಷ್ಮ ಪ್ರದೇಶಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆದರೂ ಕೆಲವು ಕಡೆ ಸಣ್ಣ ಪುಟ್ಟ ಘಟನೆಗಳಾಗಿವೆ. ಕ್ರಮ ಕೈಗೊಂಡಿದ್ದೇವೆ. ಬಿಜೆಪಿಯವರಿಗೇನು ಆರೋಪ ಮಾಡೋದು ಕೆಲಸ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ