ನನಗೂ ಬಿಜೆಪಿಗೆ ಹೋಗಬೇಕಿತ್ತು ಎಂದೆನಿಸಿತ್ತು- ಶಾಸಕ ಸುರೇಶ್ ಗೌಡ

ಶುಕ್ರವಾರ, 23 ಆಗಸ್ಟ್ 2019 (10:41 IST)
ಮಂಡ್ಯ : ಬಿಜೆಪಿಗೆ ನೀಡಿದ ಆಫರ್ ಗೆ ನನಗೂ ಬಿಜೆಪಿಗೆ ಹೋಗಬೇಕಿತ್ತು ಎಂದೆನಿಸಿತ್ತು ಎಂದು ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಬಿದ್ದೋದ ಮೇಲೆ ನಾವ್ಯಾಕೆ ಬಿಜೆಪಿ ಹೋಗ್ಲಿಲ್ಲ. ನಾವು ಹೋಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನ್ನಿಸಿತ್ತು ಆದರೆ 24 ದಿನ ಕಳೆದರೂ ಕೋರ್ಟ್ ನಿಂದ ತಡೆ ಸಿಕ್ಕಿಲ್ಲ. ಈ ಪರಿಸ್ಥಿತಿಯನ್ನು ನೋಡಿದರೆ ನಾವು ತೆಗೆದುಕೊಂಡ ನಿರ್ಧಾರವೇ ಸರಿ ಅನ್ನಿಸುತ್ತಿದೆ ಎಂದು ಹೇಳಿದ್ದಾರೆ.


ಸದ್ಯದ ಪರಿಸ್ಥಿತಿ ನೋಡಿದರೆ ಮಧ್ಯಂತರ ಚುನಾವಣೆಗೆ ಸಿದ್ಧವಾಗುವುದು ಒಳ್ಳೆಯದು. ಈಗಾಗಲೇ ನಮ್ಮ ವರಿಷ್ಠರು ಮಧ್ಯಂತರ ಚುನಾವಣೆಗೆ ತಯಾರಾಗುವಂತೆ ಹೇಳಿದ್ದಾರೆ. ತಾನು, ತನ್ನ ಮೊಮ್ಮಗನ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ದೇವೇಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಬೇಕು. ಅದು ಸತ್ಯ ಎಂದು ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ