ಡ್ರಿಂಕ್ ಅಂಡ್ ಡ್ರೈ ತಪಾಸಣೆಗೆ ಬ್ರೇಕ್ ಹಾಕಿದ್ದ ಸಂಚಾರಿ ಪೊಲೀಸ್ರು ಮತ್ತೆ ಡಿಡಿ ಕೇಸ್ ಹಾಕಲು ಮುಂದಾಗಿದ್ದಾರೆ. ಸದ್ಯ ಡ್ರಿಂಕ್ ಅಂಡ್ ಡ್ರೈ ಕುರಿತು ಅರಿವು ಮೂಡಿಸಲು ಸಂಚಾರಿ ಪೊಲೀಸರ ಹೊಸ ಪ್ಲಾನ್ ಮಾಡಿದ್ದಾರೆ. ಕೇಸ್ ಬುಕ್ ಮಾಡಿ ಫೈನ್ ಹಾಕುವ ಮೊದಲು ಸಾರ್ವಜನಿಕರಿಗೆ ಅರಿವು ಮೂಡಿಸುತ್ತಿದ್ದು,ಕುಡಿದು ಚಾಲನೆ ಮಾಡುವುದನ್ನ ತಪ್ಪಿಸಲು ಬೆಂಗಳೂರು ಸಂಚಾರಿ ಪೊಲೀಸರಿಂದ ವಿನೂತನ ಅಭಿಯಾನ ಆರಂಭಿಸಿದ್ದಾರೆ.ವಾಹನ ಸವಾರರಿಂದ ಸಹಿ ಪಡೆಯುವ ಮೂಲಕ ಅಭಿಯಾನಕ್ಕೆ ಪೊಲೀಸ್ರು ಚಾಲನೆ ನೀಡಿದ್ದಾರೆ.
ಸಹಿ ಪಡೆಯುವ ವೇಳೆ ಕುಡಿತದಿಂದ ಆಗುವ ಅವಘಡಗಳ ಬಗ್ಗೆ ಸವಾರರಿಗೆ ಅರಿವು ಮೂಡಿಸಲಾಗ್ತಿದೆ.
ಉಪ್ಪಾರಪೇಟೆ ಸಂಚಾರಿ ಪೊಲೀಸರಿಂದ ಈ ವಿಶೇಷ ಅಭಿಯಾನ ನಡೆಯುತ್ತಿದ್ದು, ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಸವಾರರಿಂದ ಸಹಿ ಪಡೆಯುವ ಮೂಲಕ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ್ರು.