ಪ್ರಧಾನಿ ಮೋದಿ ಗೆ ಸಿದ್ದರಾಮಯ್ಯ ಪ್ರಶ್ನೆ

ಶನಿವಾರ, 11 ಮಾರ್ಚ್ 2023 (17:53 IST)
ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಉದ್ಘಾಟನೆ ಮಾಡಲು ರಾಜ್ಯಕ್ಕೆ ಬರುತ್ತಿದ್ದು.ಈ ಹಿನ್ನೆಲೆ ವಿಪಕ್ಷನಾಯಕ ಸಿದ್ದರಾಮಯ್ಯ ಏಳನೇ ಕಂತಿನ ಪ್ರಶ್ನೆಗಳು ಎಂದು ಪ್ರಧಾನಿ ಮೋದಿಗೆ ಅವರಿಗೆ ಕೇಳಿದ್ದಾರೆ.
 
ಸನ್ಮಾನ್ಯ ನರೇಂದ್ರ ಮೋದಿಯವರೆ, ಬೆಂಗಳೂರು- ಮೈಸೂರು  ಹೆದ್ದಾರಿ ಉದ್ಘಾಟಿಸುವ ನೆಪದಲ್ಲಿ  ಚುನಾವಣಾ ಪ್ರಚಾರಕ್ಕೆ ಬರುತ್ತಿದ್ದೀರಿ. ತಮಗೆ ಸ್ವಾಗತ. ತಮ್ಮ ಪಕ್ಷಕ್ಕೆ ಸೋಲುವ ಭೀತಿ ಹುಟ್ಟಿಕೊಂಡಿದೆ. ಹಾಗಾಗಿ ತಾವು ದೇಶದ ಪ್ರಧಾನಿ ಎಂಬುದನ್ನು ಮರೆತು ಚುನಾವಣೆಗಳನ್ನು ನಡೆಸುವುದಕ್ಕಾಗಿಯೆ ಬಿಜೆಪಿಯು ತಮ್ಮನ್ನು ನೇಮಿಸಿದೆ ಎಂಬಂತೆ ವರ್ತಿಸುತ್ತಿದ್ದೀರಿ. ಖೊ ಖೊ ಆಟದಲ್ಲಿ ಖೊಕ್  ಕೊಡುವ ಹಾಗೆ ತಾವು ಮತ್ತು ತಮ್ಮ ಗೃಹ ಸಚಿವರು ಆಡುತ್ತಿದ್ದೀರಿ. ಅಮಿತ್ ಶಾ ಅವರು ಡೆಲ್ಲಿಗೆ ಬಂದು ನಿಮಗೆ ಖೊಕ್ ಕೊಟ್ಟ ಕೂಡಲೆ ನೀವು ಕರ್ನಾಟಕಕ್ಕೆ ಓಡಿ ಬರುತ್ತೀರಿ, ನೀವು ಹೋಗಿ ಅವರಿಗೆ ಖೊಕ್ ಕೊಟ್ಟ ಕೂಡಲೆ ಅವರು ಹಾರಿ ಬರುತ್ತಾರೆ. ನಿಮ್ಮ ಈ ವರ್ತನೆಯಂತೂ ಚರಿತ್ರೆಯಲ್ಲಿ ದಯನೀಯವಾಗಿ ದಾಖಲಾಗುತ್ತದೆ ಎಂಬುದನ್ನು ಮರೆಯಬೇಡಿ.ಮೈಸೂರು ಹೆದ್ದಾರಿ ಯೋಜನೆ ಜಾರಿಗೆ ಬರಲು ಕಾರಣರಾದ ಆಸ್ಕರ್ ಫರ್ನಾಂಡಿಸ್ ಅವರು, ಮನಮೋಹನಸಿಂಗ್ ಅವರು ಮತ್ತು ಈ ಯೋಜನೆಗೆ ಅಗತ್ಯವಿರುವ ಎಲ್ಲ ಅನುಕೂಲಗಳನ್ನು ಮಾಡಿಕೊಟ್ಟ ನಮ್ಮ ರಾಜ್ಯದ  ಕಾಂಗ್ರೆಸ್ ಸರ್ಕಾರದ ಕೊಡುಗೆಗಳನ್ನು ಪ್ರಧಾನಮಂತ್ರಿಯಾಗಿ ತಾವು ಪ್ರಸ್ತಾಪಿಸಬೇಕೆಂದು ಒತ್ತಾಯಿಸುತ್ತೇನೆ. ಇಲ್ಲದಿದ್ದರೆ ತಾವು ಕೇವಲ ಬಿಜೆಪಿಯ ಚುನಾವಣಾ ಏಜೆಂಟರೆಂದು ನಮ್ರವಾಗಿ ಒಪ್ಪಿಕೊಳ್ಳಬೇಕೆಂದು ವಿನಂತಿಸುತ್ತೇನೆ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ