ಲಾಕ್ ಡೌನ್ ಉಲ್ಲಂಘಿಸೋರ ಮೇಲೆ ದ್ರೋಣ್ ಹದ್ದಿನ ಕಣ್ಣು

ಭಾನುವಾರ, 12 ಏಪ್ರಿಲ್ 2020 (16:14 IST)
ಲಾಕ್ ಡೌನ್ ಉಲ್ಲಂಘನೆ ಮಾಡುತ್ತಿರುವವರ ಪ್ರಮಾಣ ಹೆಚ್ಚಾಗಿದ್ದು, ಇದರ ನಿಯಂತ್ರಣಕ್ಕೆ ದ್ರೋಣ್ ಹಾರಿ ಬಿಡಲಾಗುತ್ತಿದೆ.

ದಾವಣಗೆರೆ ಜಿಲ್ಲೆಯಲ್ಲಿ  ಕೋವಿಡ್ -19 ಪ್ರಕರಣಗಳು ಹೆಚ್ಚಳವಾಗುವುದನ್ನು ಪರಿಣಾಮಕಾರಿಯಾಗಿ ತಡೆಯುವುದು ಮತ್ತು ಲಾಕ್ ಡೌನ್ ಉಲ್ಲಂಘಿಸಿ ಅನಾವಶ್ಯಕ ವಾಗಿ ರಸ್ತೆ ಯಲ್ಲಿ ತಿರುಗುವವರ ಮೇಲೆ ಆಗಸದಿಂದ ಕಣ್ಣಿಡಲು ನಗರದಲ್ಲಿ ದ್ರೋಣ್  ಕ್ಯಾಮೆರಾ ಕಣ್ಗಾವಲು ಆರಂಭಗೊಂಡಿದೆ.

ನಿಷೇಧಾಜ್ಞೆ ಹಾಗೂ ಲಾಕ್‌ ಡೌನ್‌ ಇದ್ದರೂ ಜನರು ಅನಗತ್ಯವಾಗಿ ರಸ್ತೆಗಿಳಿಯುತ್ತಿರುವ ಪ್ರಕರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂತಹವರ ಮೇಲೆ ನಗರ ಪೊಲೀಸರು ಡ್ರೋನ್‌ ಮೂಲಕ ಹದ್ದಿನ ಕಣ್ಣಿಟ್ಟಿದ್ದಾರೆ. ಈ ಕಾರ್ಯ ಕ್ಕೆ ಅಜಾದ್ ನಗರದ ಪೊಲೀಸ್ ಠಾಣಾ ಆವರಣದಲ್ಲಿ ಚಾಲನೆ ದೊರೆಯಿತು.

ಯಾರು ಅನಗತ್ಯವಾಗಿ ಮನೆಯಿಂದ ಹೊರಗೆ ಓಡಾಡುತ್ತಾರೆ, ಯಾರು ಗುಂಪು ಗುಂಪಾಗಿ ಸೇರುತ್ತಾರೋ ಅಂತಹವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವ ಸಲುವಾಗಿ ಈ ಕ್ಯಾಮೆರಾ ಬಳಕೆ ಮಾಡಲಾಗುತ್ತದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ