ಕೊರೊನಾ ವೈರಸ್ ನಿಯಂತ್ರಣಕ್ಕೆ ಕಟಿಬದ್ಧವಾಗಿರುವ ರಾಜ್ಯ ಹಾಗೂ ಕೇಂದ್ರ ಸರಕಾರ ಲಾಕ್ ಡೌನ್ ಮುಂದುವರಿಸೋ ಸೂಚನೆಯನ್ನು ನೀಡಿವೆ.
ಲಾಕ್ ಡೌನ್ ಮೇ 1 ವರೆಗೆ ಮುಂದುವರಿದರೆ ಏನಿರುತ್ತೆ? ಏನೇನು ಇರಲ್ಲ ಇರೋದಿಲ್ಲ ಅನ್ನೋ ಕುತೂಹಲ ಸಹಜವಾಗಿಯೇ ಇರುತ್ತದೆ.
ಲಾಕ್ ಡೌನ್ ವಿಸ್ತರಣೆ ಆದೇಶ ಹಾಗೂ ಮಾರ್ಗಸೂಚಿಗಳನ್ನು ಇನ್ನಷ್ಟೇ ಸರಕಾರ ಬಿಡುಗಡೆಮಾಡಬೇಕಿದೆ. ಆದರೂ ಆರೋಗ್ಯ ಸೇವೆ ವಾಹನ, ಹಣ್ಣು ವ್ಯಾಪಾರ, ದಿನಸಿ ಅಂಗಡಿ, ಹಾಲು, ಮೆಡಿಕಲ್ ಶಾಪ್ ಗಳ ಸೇವೆ ಲಭ್ಯವಿರುತ್ತವೆ. ಕೃಷಿ, ಮೀನುಗಾರಿಕೆ ಚಟುವಟಿಕೆ ನಡೆಸೋದಕ್ಕೆ ಅವಕಾಶವಿದ್ದರೂ ಸಾಮಾಜಿಕ ಅಂತರ ಪಾಲಿಸಲೇಬೇಕು.
ಇನ್ನು, ಲಾಕ್ ವಿಸ್ತರಣೆ ಆದಲ್ಲಿ ಮಕ್ಕಳು ಶಾಲೆ-ಕಾಲೇಜುಗಳಿಗೆ ಹೋಗುವಂತಿಲ್ಲ. ಬಹುತೇಕ ಸರಕಾರಿ ಕಚೇರಿಗಳು ಸೇವೆಗೆ ಅಲಭ್ಯವಾಗಲಿವೆ. ಸರಕಾರದ ಮಾರ್ಗಸೂಚಿ ಪ್ರಕಟವಾದ ಬಳಿಕವಷ್ಟೇ ಇನ್ನಷ್ಟು ಸೇವೆಗಳು ಸಿಗುತ್ತವೆಯೋ ಅಥವಾ ಇಲ್ಲವೋ ಎನ್ನುವುದು ಗೊತ್ತಾಗಲಿದೆ.