ಬಿಸಿಲೂರಿನಲ್ಲಿ ಬರ ಅಧ್ಯಯನ ತಂಡ ಪ್ರವಾಸ

ಶುಕ್ರವಾರ, 1 ಫೆಬ್ರವರಿ 2019 (19:12 IST)
ರಾಜ್ಯದ ಬರ ಅಧ್ಯಯನ ತಂಡದಿಂದ ವಿವಿಧೆಡೆ ಬರ ಪರಿಶೀಲನೆ ನಡೆಸಲಾಯಿತು.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವಿವಿಧೆಡೆ, ರಾಜ್ಯದ ಬರ ಅಧ್ಯಯನ ತಂಡದಿಂದ ಬರ ಪರಿಶೀಲನೆ ನಡೆಸಲಾಯಿತು.

ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್​ ನೇತೃತ್ವದಲ್ಲಿ ಬರ ಅಧ್ಯಯನ ಉಪ ಸಮಿತಿ ಸದಸ್ಯರು, ಸಿಂಧನೂರು ತಾಲೂಕಿನ ತುರವಿಹಾಳ್ ಗ್ರಾಮದಲ್ಲಿ ರೈತರ ಜಮೀನುಗಳಿಗೆ ತೆರಳಿ, ಜೋಳ, ಭತ್ತ, ಹತ್ತಿ ಬೆಳೆಗಳ ವೀಕ್ಷಣೆ ಮಾಡಿದರು. ಬಳಿಕ ಬೆಳೆ ನಷ್ಟದ ಬಗ್ಗೆ ರೈತರಿಂದಲೂ ಮಾಹಿತಿ ಪಡೆದು ಕೆಲಕಾಲ ಚರ್ಚೆ ನಡೆಸಿದರು.

ಮಾಟುರು ಕೆರೆಯಲ್ಲಿ ನಡೆದ ನರೇಗಾ ಕೆಲಸ ವೀಕ್ಷಿಸಿ ಕೆಲಸಗಾರರೊಂದಿಗೆ ಸರ್ಕಾರದ ಸೌಲಭ್ಯಗಳು ಸಿಗುತ್ತಿರುವುದರ ಬಗ್ಗೆ ಚರ್ಚೆ ನಡೆಸಿದರು. ರಾಯಚೂರು ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ, ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ್, ಸಚಿವ ಬಂಡೆಪ್ಪ ಕಾಶೆಂಪೂರ್​ಗೆ ಸಾಥ್ ನೀಡಿದರು. ಜಿಲ್ಲಾಧಿಕಾರಿ ಶರತ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ