ಹುಡುಗಿಯರೇ ಹುಷಾರ್! ನಿಮ್ಮ ಟಿಕ್ ಟಾಕ್ ವಿಡಿಯೋವನ್ನು ಅಶ್ಲೀಲವಾಗಿ ಬಳಸಿಕೊಳ್ಳುವವರಿದ್ದಾರೆ ಎಚ್ಚರ

ಶುಕ್ರವಾರ, 1 ಫೆಬ್ರವರಿ 2019 (05:54 IST)
ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟಿಕ್ ಟಾಕ್ ವಿಡಿಯೋ ಅಪ್ಲೋಡ್ ಮಾಡುವುದು ಹೆಚ್ಚಾಗಿ ಬಿಟ್ಟಿದೆ. ಆದರೆ ಇದೀಗ ಯುವತಿಯೊಬ್ಬಳ ಟಿಕ್ ಟಾಕ್ ವಿಡಿಯೋವನ್ನು ಕಿರಾತಕರು ಅಶ್ಲೀಲವಾಗಿ  ಬಳಸಿಕೊಂಡ ಘಟನೆ ನಡೆದಿದೆ.


ಹೌದು. ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ನಿವಾಸಿ ರಮ್ಯಾ ಯಾವಾಗಲೂ ಟಿಕ್ ಟಾಕ್‍ನಲ್ಲಿ ವಿಡಿಯೋ ಅಪ್ಲೋಡ್ ಮಾಡುತ್ತಿದ್ದಳು. ಆಕೆಯ ವಿಡಿಯೋಗಳಿಗೆ ತುಂಬಾ ಲೈಕ್ಸ್ ಕೂಡ ಬಂದಿತ್ತು. ಆದರೆ ಈ ವಿಡಿಯೋವನ್ನು ಕೆಲ ಕಿಡಿಗೇಡಿಗಳು ಅಶ್ಲೀಲ  ಆಡಿಯೋ  ಸೇರಿಸಿ ಮತ್ತೊಂದು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಬಳಿಕ ಟಿಕ್ ಟಾಕ್‍ನಲ್ಲಿ ಕ್ಷಮೆ ಕೇಳುವಂತೆ ಕಿಡಿಗೇಡಿಗಳು ವಾರ್ನ್ ಮಾಡಿದ್ದಾರೆ.


ಅಷ್ಟೇ ಅಲ್ಲದೇ ರಮ್ಯಾಳ ಕಾಲೇಜ್ ಬಳಿ ಬಂದು ಕೆಲವರು ಇನ್ನು ಮುಂದೆ ಹಿಂಗೆಲ್ಲ ಮಾಡಿದ್ರೆ ಸರಿ ಇರಲ್ಲ, ಮೊದಲು ವಿಡಿಯೋ ಡಿಲೀಟ್ ಮಾಡು ಎಂದು ಬೆದರಿಕೆ  ಹಾಕಿದ್ದಾರೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಇದೀಗ ರಮ್ಯಾ ಈ ಕುರಿತು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ