ಡ್ರಗ್ಸ್ ಮಾರಾಟದಿಂದ ಖರೀದಿಸಿದ್ದ ಕೋಟ್ಯಂತರ ಮೌಲ್ಯದ ಆಸ್ತಿ ಜಫ್ತಿ!
ಶನಿವಾರ, 4 ಸೆಪ್ಟಂಬರ್ 2021 (19:23 IST)
ಡ್ರಗ್ಸ್ ಮಾರಾಟದಿಂದ ಬಂದ ಆ
ದಾಯದಿಂದ ಖರೀದಿಸಿದ್ದ ಆಸ್ತಿ ಸೇರಿದಂತೆ 1.68 ಕೋಟಿ ರೂ. ಮೌಲ್ಯದ ಸೊತ್ತನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಂಜಯ್ ಕುಮಾರ್ ಸಿಂಗ್ ಅಲಿಯಾಸ್ ತೂನಸಿಂಗ್ ಡ್ರಗ್ಸ್ ಮಾರಾಟದಿಂದ ಸಂಪಾದಿಸಿದ್ದ ಹಣದಿಂದ ಗಳಿಸಿದ್ದ ಆಸ್ತಿಯನ್ನು ಎನ್ ಡಿಪಿಎಸ್ ಕಾಯ್ದೆ 1985 ಅಧ್ಯಾಯ 5ಎ ಅಡಿ ತನಿಖೆ ನಡೆಸಿ ಆಸ್ತಿ ಜಫ್ತಿ ಮಾಡಲಾಗಿದೆ. ಇದೇ ಮೊದಲ ಬಾರಿ ರಾಜ್ಯದಲ್ಲಿ ಈ ಕಾಯ್ದೆಯಡಿ ಆಸ್ತಿಯನ್ನು ಜಫ್ತಿ ಮಾಡಲಾಗಿದೆ.
2016ರಿಂದ ಆನೇಕಲ್ ನಲ್ಲಿ ವಾಸವಾಗಿದ್ದ ಅಂಜಯ್ ಕುಮಾರ್ ಸಿಂಗ್ ನಿಂದ 2019ರಲ್ಲಿ ಸೂರ್ಯನಗರ ಪೊಲೀಸರು 822 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಂಡು ಬಿಹಾರದಲ್ಲಿ ತಲೆಮರೆಸಿಕೊಂಡಿದ್ದ.
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವರ್ಷದ ಬಳಿಕ ಮತ್ತೆ ನಗರಕ್ಕೆ ಬಂದಿದ್ದ ಅಜಯ್ ಸಿಂಗ್, ಆನೇಕಲ್ ನಲ್ಲಿ ವಾಸವಾಗಿದ್ದ. ಆರೋಪಿ ಅಜಯ್ ಕುಮಾರ್ ಸಿಂಗ್ ಪತ್ನಿ ಶೀಲಾದೇವಿ ಹೆಸರಿನಲ್ಲಿ ಆಸ್ತಿ ಖರೀದಿಸಿದ್ದ. ಅಲ್ಲದೇ ನಗರದ ಹೊರವಲಯದ ಹಲವು ಕಡೆಗಳಲ್ಲಿ ಆಸ್ತಿಯನ್ನು ಮಾಡಿದ್ದ.
ಬಿಹಾರ, ಉತ್ತರಪ್ರದೇಶ, ದೆಹಲಿ ಸೇರಿ ಹಲವು ಕಡೆಗಳಲ್ಲಿ ಕೂಡ ಡ್ರಗ್ಸ್ ಮಾರಾಟ ಪ್ರಕರಣಗಳು ಕೂಡ ಈತನ ವಿರುದ್ಧ ದಾಖಲಾಗಿದ್ದು, 30x40 ಅಳತೆಯ ಒಂದು ಸೈಟ್, 60x40 ಅಳತೆಯ ಎರಡು ಸೈಟ್ ಖರೀದಿಸಿದ್ದ. ಅಲ್ಲದೇ ಸತ್ಕಿರ್ಥಿ ಅಪರ್ಟ್ ಮೆಂಟ್ ನ ಒಂದು ಪ್ಲಾಟ್, ಸ್ಕಾರ್ಪಿಯೋ ಕಾರು ಹೊಂದಿದ್ದ. ಸರಿಸುಮಾರು 1.68 ಕೋಟಿ ನಗದು, ಚಿನ್ನಾಭರಣವೂ ವಶಕ್ಕೆ ಪಡೆಯಲಾಗಿದೆ.