ವಿಶ್ವದ ಮೊದಲ ಪೇಪರ್‌ಲೆಸ್‌ ಸರ್ಕಾರ ದುಬೈ

ಮಂಗಳವಾರ, 14 ಡಿಸೆಂಬರ್ 2021 (20:31 IST)
ವಿಶ್ವದ ಮೊದಲ ಪೇಪರ್‌ಲೆಸ್‌ ಸರ್ಕಾರ ದುಬೈ ಆಗಿದೆ. ಶೇ.100ರಷ್ಟು ಕಾಗದರಹಿತ ಆಡಳಿತ ಜಾರಿ ಮಾಡಿದ ವಿಶ್ವದ ಮೊದಲ ದೇಶ ಎಂಬ ಖ್ಯಾತಿಗೆ ದುಬೈ ಪಾತ್ರವಾಗಿದೆ ಎಂದು ಯುವರಾಜ ಶೇಖ್ ಹಮದ್ ಬಿನ್ ಮಹಮ್ಮದ್ ಬಿನ್ ರಶೀದ್ ಆಲ್ ಮುಕ್ತುಮ್  ಘೋಷಿಸಿದ್ದಾರೆ.
ದುಬೈ 2.65 ಲಕ್ಷ ಕೋಟಿ ಹಣ ಮತ್ತು 1.4ಲಕ್ಷ ಕೋಟಿ ಮಾನವ ಗಂಟೆಗಳನ್ನು ಉಳಿತಾಯ ಮಾಡಿದೆ ಎಂದು ತಿಳಿಸಿದ್ದಾರೆ. ಇನ್ಮುಂದೆ ದುಬೈ ಸರ್ಕಾರದ ಎಲ್ಲಾ ಆಂತರಿಕ ಮತ್ತು ಬಾಹ್ಯ ವಹಿವಾಟು ಮತ್ತು ಕಾರ್ಯ ವಿಧಾನಗಳು ಶೇ.100ರಷ್ಟು ಡಿಜಿಟಲ್ ಆಗಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ