6 ರಿಂದ 8 ನೇ ತರಗತಿ ಆರಂಭಕ್ಕೆ ಡಲ್ ರೆಸ್ಪಾನ್ಸ್ !!

ಮಂಗಳವಾರ, 7 ಸೆಪ್ಟಂಬರ್ 2021 (19:52 IST)
ಬೆಂಗಳೂರು : ಹೈ ಸೂಲ್ಕ್ ಆರಂಭಕ್ಕೆ  ಒಳ್ಳೆ ರೆಸ್ಪಾನ್ಸ್ ಸಿಕ್ತು ಅಂತ ಶಿಕ್ಷಣ ಇಲಾಖೆ ಪ್ರೈಮರಿಗೂ ಗ್ರೀನ್ ಸಿಗ್ನಲ್ ಕೊಡ್ತು  . ಆದ್ರೆ ಈಗ ವಿದ್ಯಾರ್ಥಿಗಳು ಮಾತ್ರ ಶಾಲೆ ಕಡೆನೇ ಮುಖ ಮಾಡಿಲ್ಲ .ಹೌದು ಕಳೆದ 2 ವರ್ಷಗಳಿಂದ ಬಾಗಿಲು ಮುಚ್ಚಿದ್ದ ಪ್ರಾಥಮಿಕ ಶಾಲೆ ನೆನ್ನೆಯಿಂದ ಒಪೆನ್ ಆಯ್ತು  .. ಸರ್ಕಾರ ಕೂಡ ವಿದ್ಯಾರ್ಥಿಗಳಿಂದ ಒತ್ತಾಯ ಕೇಳಿ ಬರುತ್ತಿದೆ ಅಂತ ಶಾಲೆ ಆರಂಭ ಮಾಡಿತು . ಆದ್ರೆ ಈಗ ಅನ್ ಲೈನ್ ಕ್ಲಾಸ್ ಬೇಡ ಅಂದವರೆ ಉಲ್ಟಾ ಒಡೆದಿದ್ದರೆ .. ಕೋವಿಡ್ ಭಯದಿಂದ ನೆನ್ನೆ ರಾಜ್ಯಾದ್ಯಂತ ಕೇವಲ 28 ರಷ್ಟು ವಿದ್ಯಾರ್ಥಿಗಳು ಮಾತ್ರ ಶಾಲೆಗೆ ಬಂದ್ರು .ಉಳಿದವರೆಲ್ಲ ಇನ್ನು ಕೆಲವು ದಿನ ಅನ್ ಲೈನ್ಸ್ ಕ್ಲಾಸ್ ಇರಲಿ ಅಂತ  ಮನೆಯಿಂದಲೇ ಪಾಠ ಕೇಳುತ್ತಿದ್ದಾರೆ .. ಇತ್ತ ಪೋಷಕರು ಕೂಡ ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ .. ಮಕ್ಕಳಿಗೆ ಇನ್ನು ವ್ಯಾಕ್ಸಿನ್ ಇಲ್ಲ ಕೊನೆ ಹಂತದಲ್ಲಿ ರಿಸ್ಕ್ ಯಾಕೆ ಅಂತ ಅಭಿಪ್ರಾಯ ಪಟ್ಟಿದ್ದಾರೆ . ಇನ್ನು ಶಾಲೆ ಆರಂಭ ಮಾಡಿ ಅಂತ. ಸರ್ಕಾರ ಹೇಳಿದ್ರು ಕೂಡ ಖಾಸಗಿ ಶಾಲೆಗಳು ಮಾತ್ರ ಶಾಲೆ ಆರಂಭಕ್ಕೆ ಹಿಂದೇಟು ಹಾಕಿದ್ದಾರೆ . ಹೀಗಾಗಿ ಕೇವಲ 35 % ರಷ್ಟು ಶಾಲೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. 
 
ಹೆಡ್ಡರ್ )  ಹಗಾದ್ರೆ ಅತಿ ಕಮ್ಮಿ ಹಾಜರಾತಿ ಇರೋ ಜಿಲ್ಲೆಗಳು 
 
ಬೆಂಗಳೂರು ಉತ್ತರ 10 .85
ಚಿಕ್ಕಮಗಳೂರು ಶೇ.19 
ಬೆಂಗಳೂರು ದಕ್ಷಿಣ 23 
 
 
ಇನ್ನು ಮೂಲಗಳ ಪ್ರಕಾರ ಖಾಸಗಿ ಶಾಲೆಗಳಿಗೆ ಅನ್ ಲೈನ್ ಕ್ಲಾಸ್ ಹಾಗೂ ಆಫ್  ಲೈನ್ ಕ್ಲಾಸ್ ಎರಡು ನಡೆಸೋದು ಕಷ್ಟ ಅಂತ ಅನ್ ಲೈನ್ಸ್ ಕ್ಲಾಸ್ ಮುಂದುವರೆಸಿದೆ ಅಂತೆ ಹೇಳಲಾಗುತ್ತಿದೆ . ಹೀಗಾಗಿ ಇಲಾಖೆಯ ಅಧಿಕಾರಿಗಳು ಶಾಲೆಗಳ ಆರಂಭ ಮಾಡಿ ಇಲ್ಲ ಅಂದ್ರೆ ಮಕ್ಕಳಿಗೆ ಬ್ರಿಡ್ಜ್ ಕೋರ್ಸ್ ಸಿಗಲ್ಲ . ಇದರಿಂದ ಮಕ್ಕಳಿಗೆ ಲಾಸ್ ಆಗುತ್ತೆ ಅಂತ ತಿಳಿಸಿದ್ದಾರೆ . 
 
ಇನ್ನು ಈ ಪೈಕಿ ಕೆಲವು ಜಿಲ್ಲೆಗಳಲ್ಲಿ ಮೊದಲ ದಿನವೇ ಗುಡ್ ರೆಸ್ಪಾನ್ಸ್ ಸಿಕ್ಕಿದೆ . ತುಮಕೂರು , ಬೆಳಗಾವಿ , ಚಿಕ್ಕೋಡಿ ಭಾಗಗಳಲ್ಲಿ ಅತಿ ಹೆಚ್ಚು ಹಾಜರಾತಿ ದಾಖಲಾಗಿದೆ . ಒಟ್ಟಿನಲ್ಲಿ 6 ರಿಂದ 8 ನೇ ಕ್ಲಾಸ್ ಆರಂಭಕ್ಕೆ ಮೊದಲ ಎರಡು ದಿನ ಡಲ್ ರೆಸ್ಪಾನ್ಸ್ ಸಿಕ್ಕಿದೆ . ಹೀಗಾಗಿ  1ರಿಂದ 5 ತರಗತಿ ಆರಂಭ ಮತಷ್ಟು ವಿಲಂಭ ಮಾಡೋ ಸಾಧ್ಯತೆ ಜಾಸ್ತಿ ಇದೆ . 3 ನೇ ಅಲೆ ಕೂಡ ಸಮೀ ಇಸುತ್ತಿರೋದ್ರಿಂದ ಪುಟಾಣಿಗಳಿಗೆ ಈ ಬಾರಿಯೂ ಮನೆ ಪಾಠ ಶಾಲೆ ಆಗುತ್ತಾ ಕಾದು ನೋಡಬೇಕಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ