ಸೋಮವಾರದಿಂದ ಎರಡನೇ ಹಂತದ ಶಾಲಾರಂಭ
ಸೋಮವಾರದಿಂದ ರಾಜ್ಯದಲ್ಲಿ ಶಾಲೆ ಆರಂಭ ಬಹುತೇಕ ಖಚಿತವಗಿದ್ದು, ಶಿಕ್ಷಣ ಇಲಾಖೆ ಸುತ್ತೋಲೆ ಬಿಡುಗಡೆಮಾಡಿದೆ. ಮೊದಲ ಹಂತದಲ್ಲಿ 9 ರಿಂದ 12 ನೇ ತರಗತಿಗಳು ಆರಂಭವಾಗಿದ್ದು, ಈಗ ಹಂತ ಹಂತವಾಗಿ ಎಲ್ಲಾ ತರಗತಿಗಳನ್ನ ಆರಂಭ ಮಾಡಲು ಸಿದ್ಧವಾಗಿದ್ದು ಈಗ ಎರಡನೇ ಹಂತದ ಅಂದ್ರೆ 6,7,8 ನೇ ತರಗತಿ ಶಾಲೆ ಸೋಮವಾರದಿಂದ ಆರಂಭವಾಗಲಿದೆ. ಅಷ್ಟೇ ಅಲ್ಲದೆ ಶಾಲೆ ಆರಂಭಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನ ಕೂಡ ಶಿಕ್ಷಣ ಇಲಾಖೆ ಕೈಗೊಂಡಿದೆ.