ಶೃಂಗೇರಿ ಶಾರದಾಂಬೆಯ ದರ್ಶನ ಪಡೆದ ಸಿಎಂ ಯಡಿಯೂರಪ್ಪ

ಗುರುವಾರ, 12 ಸೆಪ್ಟಂಬರ್ 2019 (11:36 IST)
ಚಿಕ್ಕಮಗಳೂರು : ಸಿಎಂ ಆದ  ಬಳಿಕ ಇದೇ ಮೊದಲಬಾರಿಗೆ  ಬಿ.ಎಸ್. ಯಡಿಯೂರಪ್ಪ ಇಂದು ಶೃಂಗೇರಿಗೆ  ಭೇಟಿ ನೀಡಿ ಶಾರದಾಂಬೆಯ ದರ್ಶನ ಪಡೆದಿದ್ದಾರೆ.ಇಂದು ಬೆಳಗ್ಗೆ 9 ಗಂಟೆಗೆ ಹೆಲಿಕಾಪ್ಟರ್ ​ನಲ್ಲಿ ಶೃಂಗೇರಿಗೆ ಆಗಮಿಸಿದಸಲಿರುವ ಸಿಎಂ ಯಡಿಯೂರಪ್ಪ ಶಾರದಾಂಬಾ ದರ್ಶನ ಪಡೆದು, ಶ್ರೀಗಳ ಆಶೀರ್ವಾದ ಪಡೆದಿದ್ದಾರೆ. ಸಿಎಂ ಗೆ ಶೋಭಾ ಕರಂದ್ಲಾಜೆ ಅವರು ಸಾಥ್ ನೀಡಿದ್ದಾರೆ.


 

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಈ ಹಿಂದೆ ಮಳೆ ಬರಬೇಕೆಂದು ಪೂಜೆ ಮಾಡುತ್ತಿದ್ದೇವು. ಈಗ ಮಳೆ ನಿಲ್ಲಬೇಕೆಂದು ಪೂಜೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಹಾಗೆ ಡಿಕೆಶಿ ಬಂಧನ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷದವರು ತಮ್ಮ ಅಸ್ತಿತ್ವ  ತೋರಿಸಬೇಕಾಗಿದೆ. ಹೀಗಾಗಿ ಅವರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ