ದಸರಾ ಗಜಪಡೆಯ ತೂಕ ಪರೀಕ್ಷೆ : 5 ಟನ್ ತೂಗಿದ ಕ್ಯಾಪ್ಟನ್ ಅಭಿಮನ್ಯು

ಬುಧವಾರ, 6 ಸೆಪ್ಟಂಬರ್ 2023 (11:19 IST)
ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಕಾಡಿನಿಂದ ಅರಮನೆಯ ಆವರಣಕ್ಕೆ ಬಂದಿರುವ ಗಜಪಡೆಯ ತೂಕ ಪರೀಕ್ಷೆ ಮಾಡಲಾಯಿತು. ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ತೂಕ ಪರೀಕ್ಷೆ ಒಳ ಪಡಿಸಲಾಯಿತು.
 
ಈ ವೇಳೆ ಆನೆಗಳ ತೂಕ ಆರೋಗ್ಯಕರವಾಗಿರುವುದು ಕಂಡು ಬಂದಿದೆ. ಮೈಸೂರು ಅರಮನೆಯಿಂದ ಪೊಲೀಸರ ಬಿಗಿ ಭದ್ರತೆಯಲ್ಲಿ ತೂಕ ಮಾಪನ ಕೇಂದ್ರಕ್ಕೆ ಗಜಪಡೆಗೆಯನ್ನು ಕರೆತರಲಾಯಿತು. ಈ ವೇಳೆ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು 5,160 ಕೆಜಿ ತೂಗಿದ್ದಾನೆ. ಈ ಮೂಲಕ ಆರೋಗ್ಯವಂತ ತೂಕವನ್ನು ಹೊಂದಿದ್ದಾನೆ ಎಂದು ಗುರುತಿಸಲಾಗಿದೆ.

ಆನೆಗಳ ತೂಕದ ಆಧಾರದ ಮೇಲೆ ಅವುಗಳ ಆಹಾರ ಮತ್ತು ತರಬೇತಿ ನಿಗದಿಯಾಗುತ್ತದೆ. ಆನೆಗಳು ಆರೋಗ್ಯವಂತ ತೂಕವನ್ನು ಹೊಂದಿದ್ದು, ಅವುಗಳಿಗೆ ಸೂಕ್ತ ಆಹಾರ ಹಾಗೂ ತರಬೇತಿಗೆ ಸಜ್ಜುಗೊಳಿಸಲು ಕ್ರಮ ವಹಿಸಲಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ