ಅದ್ದೂರಿ ದಸರಾ ಮಾಡಲು ಸರ್ಕಾರ ತೀರ್ಮಾನಿಸಿದೆ
ಈ ಬಾರಿ ಅದ್ದೂರಿಯಾಗಿ ದಸರಾ ಆಚರಿಸಲು ಸರ್ಕಾರ ತೀರ್ಮಾನಿಸಿದೆ. 30 ಕೋಟಿ ಅನುದಾನ ಕೊಡುವಂತೆ ಸಿಎಂಗೆ ಮನವಿ ಮಾಡಿದ್ದೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.H.C.ಮಹದೇವಪ್ಪ ತಿಳಿಸಿದ್ದಾರೆ.. ಮೈಸೂರಿನಲ್ಲಿ ಮಾತನಾಡಿದ ಅವರು, ಗಜಪಡೆಗಳಿಗೆ ವಿದ್ಯುಕ್ತವಾಗಿ ಗಜಪಯಣ ಮೂಲಕ ಸ್ವಾಗತ ಕೋರಲಾಗಿದೆ. ನಾಡ ದೇವತೆ ಚಾಮುಂಡೇಶ್ವರಿ ತಾಯಿಯ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದ್ದಾರೆ. ಮೊದಲ ಹಂತದಲ್ಲಿ 9 ಆನೆಗಳು ಕಾಡಿನಿಂದ ನಾಡಿಗೆ ಬರುತ್ತಿವೆ. ಇನ್ನೂ 5 ಆನೆಗಳು ತಂದ ನಂತರ ಅರಮನೆಗೆ ಬರುತ್ತವೆ ಎಂದು ಹೇಳಿದ್ರು.. ಮಾವುತರು ಹಾಗೂ ಕಾವಾಡಿಗರಿಗೆ ಪ್ರೋತ್ಸಾಹ ನೀಡುತ್ತೇವೆ. ದೇಶ ವಿದೇಶಗಳಿಂದ ಲಕ್ಷಾಂತರ ಜನರು ಬರುತ್ತಾರೆ. ಆದ್ರಿಂದ ಅದ್ದೂರಿ ದಸರಾ ಆಚರಣೆಗೆ ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಧಾರ್ಮಿಕ ವಿಚಾರ, ರಾಜ್ಯಡಳಿತವನ್ನ ಸಂರಕ್ಷಣೆ ಮಾಡುವ ದೃಷ್ಟಿಯಿಂದ ಈ ಬಾರಿ ದಸರಾ ಆಚರಣೆ ಮಾಡುತ್ತೇವೆ ಎಂದು ಹೇಳಿದ್ರು.