ಉಸ್ತುವಾರಿ ಸಚಿವರಿಗೆ ನೇರ ಸವಾಲ್ ಹಾಕಿದ ಅನುಪಮಾ

ಮಂಗಳವಾರ, 7 ಜೂನ್ 2016 (08:39 IST)
ಮೂರು ದಿನಗಳ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕೂಡ್ಲಿಗಿ ಡಿವೈಎಸ್‌ಪಿ ಅನುಪಮಾ ಶೆಣೈ ಅವರ ಫೇಸ್‌ಬುಕ್ ಸಮರ ಮುಂದುವರೆದಿದ್ದು ಇದೀಗ ಅವರು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ ಅವರಿಗೆ ನೇರ ಸವಾಲು ಹಾಕಿದ್ದಾರೆ.
 
ಅವರ ಫೇಸ್‌ಬುಕ್ ಸ್ಟೇಟಸ್ ಹೀಗಿದೆ: *ಪಿ ಟಿ ಪರಮೇಶ್ವರ ನಾಯ್ಕರೇ ನಾನು ರಾಜೀನಾಮೆ ನೀಡಿದ್ದೇನೆ. ನೀವು ಯಾವಾಗ ರಾಜೀನಾಮೆ ನೀಡುತ್ತೀರಾ?
‪#‎WashingPowderNirmaPart2‬*
 
ಈ ಸ್ಟೇಟಸ್ ಹಲವಾರು ಪ್ರಶ್ನೆಗಳನ್ನು ಹುಟ್ಟಿ ಹಾಕಿದ್ದು ಪಿ.ಟಿ ಪರಮೇಶ್ವರ ನಾಯ್ಕ್ ಅವರಿಗೂ ಅನುಪಮಾ ರಾಜೀನಾಮೆಗೆ ಏನಾದರೂ ಸಂಬಂಧ ಇದೆಯಾ ಎಂಬ ಪ್ರಶ್ನೆ ಕಾಡುತ್ತಿದೆ.
 
ರಾಜೀನಾಮೆ ನೀಡಿದ ದಿನದಿಂದ ಈವರೆಗೆ ಅನುಪಮಾ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಆದರೆ ಫೇಸ್‌ಬುಕ್‌ನಲ್ಲಿ ಎಕ್ಟಿವ್ ಆಗಿರುವ ಅವರು ಒಂದರ ಹಿಂದೆ ಒಂದು ಪೋಸ್ಟಿಂಗ್, ಸ್ಟೇಟಸ್ ಪ್ರಕಟಿಸುವುದರ ಮೂಲಕ ಇಡೀ ಆಡಳಿತ ವ್ಯವಸ್ಥೆಯ ವಿರುದ್ಧ ಸಿಡಿದೆದ್ದಿದ್ದಾರೆ. 
 
ಲಿಕ್ಕರ್ ಲಾಬಿ ಮಟ್ಟ ಹಾಕಲು ಶತ ಪ್ರಯತ್ನ ನಡೆಸಿದ್ದ ದಕ್ಷ ಅಧಿಕಾರಿ 50 ದಿನಗಳಲ್ಲಿ 16 ಪ್ರಕರಣಗಳನ್ನು ದಾಖಲಿಸಿದ್ದರು. ಅಲ್ಲದೇ 18 ಆರೋಪಿಗಳನ್ನು ಜೈಲಿಗಟ್ಟಿದ್ದರು. ಇದೇ ಅವರ ರಾಜೀನಾಮೆಗೆ ಕಾರಣವಾಯ್ತೇ ಎಂಬ ಸಂಶಯಕ್ಕೆ ಈ ಸ್ಟೇಟಸ್ ಪುಷ್ಠಿ ನೀಡಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ