ಇಡಿ, ಐಟಿ ಬಿಜೆಪಿಯ ಸೀಳು ನಾಯಿಗಳು- ಕೃಷ್ಣಭೈರೇಗೌಡ ವಾಗ್ದಾಳಿ

ಬುಧವಾರ, 11 ಸೆಪ್ಟಂಬರ್ 2019 (12:27 IST)
ಬೆಂಗಳೂರು : ಇಡಿ, ಐಟಿ ಬಿಜೆಪಿಯ ಸೀಳು ನಾಯಿಗಳು ಎಂದು ಬಿಜೆಪಿಯ ವಿರುದ್ಧ ಕೃಷ್ಣಭೈರೇಗೌಡ ವಾಗ್ದಾಳಿ ನಡೆಸಿದ್ದಾರೆ.ಡಿಕೆಶಿ ಬಂಧನ ಖಂಡಿಸಿ ಒಕ್ಕಲಿಗರು ನಡೆಸಿದ ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಿಜೆಪಿಯವರು ದೇಶವನ್ನು ಹಾಳು ಮಾಡುತ್ತಿದ್ದಾರೆ. ಸಿದ್ದಾರ್ಥ್ ಅವರ ಮೇಲೆ ಐಟಿಯನ್ನ ಛೂ ಬಿಟ್ಟಿದ್ದರು. ಐಟಿ ಕಾಟ ತಾಳಲಾರದೆ ಸಿದ್ದಾರ್ಥ್ ಆತ್ಮಹತ್ಯೆಗೆ ಶರಣಾದ್ರು. ನಾವು ದೇಶಪ್ರೇಮಿಗಳು ದೇಶವನ್ನ ಉಳಿಸುತ್ತೇವೆ’ ಎಂದು ಕಿಡಿಕಾರಿದ್ದಾರೆ.

 

‘ಬಿಜೆಪಿಯವರು ಹೇಡಿಗಳ ರೀತಿ ಇಡಿ, ಐಟಿಯನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಸಾಂವಿಧಾನಿಕ ಸಂಸ್ಥೆಗಳನ್ನ ನಾಯಿಗಳ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ವಿಜಯ್ ಮಲ್ಯ ದೇಶ ಬಿಟ್ಟು ಹೋಗಿದ್ದಾಗ ಎಲ್ಲಿ ಹೋಗಿದ್ದರು? ನಿರವ್, ಮಲ್ಯ ಮೇಲೆ ಏಕೆ ಐಟಿ ಪ್ರಯೋಗ ಮಾಡಲಿಲ್ಲ? ಡಿಕೆಶಿ ತಮ್ಮ ಬಳಿ ಇದ್ದ ಹಣಕ್ಕೆ ಲೆಕ್ಕ ಕೊಟ್ಟಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ