ಇಡಿ, ಸಿಬಿಐ ಬಳಸಿ ಕಾಂಗ್ರೆಸ್ ನಾಯಕರನ್ನ ಹಣಿಯಲಾಗ್ತಿದೆ.- ರಾಮಲಿಂಗಾ ರೆಡ್ಡಿ ಕಿಡಿ

ಬುಧವಾರ, 11 ಸೆಪ್ಟಂಬರ್ 2019 (12:25 IST)
ಬೆಂಗಳೂರು : ಮಾಜಿ ಸಚಿವ ಡಿಕೆ ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗರು ರಾಜಧಾನಿಯಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸುತ್ತಿದ್ದು, ಸಾವಿರಾರು ಡಿಕೆಶಿ ಬೆಂಬಲಿಗರು ಈ ರ್ಯಾಲಿಯಲ್ಲಿ ಪಾಲ್ಗೊಂಡು ಹೋರಾಟ ಮಾಡುತ್ತಿದ್ದಾರೆ.
ಈ ರ್ಯಾಲಿಯಲ್ಲಿ ಕಾಂಗ್ರೆಸ್ ನ ಹಿರಿಯ ಮುಖಂಡ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅವರು ಭಾಗವಹಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಡಿ, ಸಿಬಿಐ ಬಳಸಿ ಕಾಂಗ್ರೆಸ್ ನಾಯಕರನ್ನ ಹಣಿಯಲಾಗ್ತಿದೆ. ಕಾಂಗ್ರೆಸ್ ಜಾತಿ ಆಧಾರದಲ್ಲಿ ಎಂದಿಗೂ ರಾಜಕೀಯ ಮಾಡಿಲ್ಲ. ಗುಜರಾತ್ ಕೈ ಶಾಸಕರನ್ನು ರಕ್ಷಿಸಿದ್ದಕ್ಕೆ ಡಿಕೆಶಿಯನ್ನ ಬಂಧಿಸಲಾಗಿದೆ. ಕೇಂದ್ರ ಸರ್ಕಾರದ ದ್ವೇಷದ ರಾಜಕೀಯದ ವಿರುದ್ಧ ನಮ್ಮ ಹೋರಾಟ’ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ