ಕಾಂಗ್ರೆಸ್ ಶಾಸಕ ಜಮೀರ್ ಅಹ್ಮ ದ್ ಗೆ ಇಡಿ ಶಾಕ್!
ಗುರುವಾರ ಬೆಳಿಗ್ಗೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳು ಸತತ ಮೂರು ಗಂಟೆಯಿಂದ ಬೆಂಗಳೂರಿನಲ್ಲಿರುವ ನ್ಯಾಷನಲ್ ಟ್ರಾವೆಲ್ ಕಚೇರಿಯಲ್ಲಿ ಶೋಧ ನಡೆಸಿದ್ದಾರೆ.
6 ಅಧಿಕಾರಿಗಳ ತಲಾ ಇಬ್ಬರ ಮೂರು ತಂಡಗಳು ಎಲ್ಲಾ ಅಯಮಾದಲ್ಲೂ ತನಿಖೆ ನಡೆದಿದ್ದು, ನ್ಯಾಷನಲ್ ಟ್ರಾವೆಲ್ ನಲ್ಲಿ ನಡೆದಿರುವ ಬ್ಯಾಂಕ್ ವ್ಯವಹಾರದ ದಾಖಲೆ ಪರಿಶೀಲನೆ ಸಿಬ್ಬಂದಿ ಸಮ್ಮುಖದಲ್ಲೇ ನಡೆಸಲಾಗಿದೆ.
ಟ್ರಾವೆಲ್ಸ್ ಸಿಬ್ಬಂದಿಯನ್ನು ಒಬ್ಬರನ್ನೇ ಒಳಗಡೆ ಕರೆಸಿ ಮಾಹಿತಿ ಪಡೆಯುತ್ತಿರುವ ಅಧಿಕಾರಿಗಳು, ಮತ್ತಷ್ಟು ನ್ಯಾಷನಲ್ ಟ್ರಾವೆಲ್ ಬ್ರಾಂಚ್ ಗಳ ಮಾಹಿತಿ ಪಡೆಯಲು ಸಿಬ್ಬಂದಿ ಬರುವಂತೆ ಸೂಚನೆ ನೀಡಿದ್ದಾರೆ.
ಕಳೆದ 6 ತಿಂಗಳ ವ್ಯವಹಾರದ ದಾಖಲೆಗಳ ಸಮೇತ ದಾಳಿ ನಡೆಸಿರುವ ಐಟಿ ಅಧಿಕಾರಿಗಳು. ಸಿಆರ್ ಪಿಎಫ್ ಪೊಲೀಸರ ಭದ್ರತೆಯಲ್ಲಿ ಜಮೀರ್ ಅಹ್ಮದ್ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.