ಕನ್ನಡ ಬಾರದ ಸಚಿವರಿಂದ ಶಿಕ್ಷಣ ಇಲಾಖೆ ದುರ್ಬಲವಾಗುದಿಲ್ಲವೆ: ಬಸನಗೌಡ ಪಾಟೀಲ್ ವ್ಯಂಗ್ಯ

Sampriya

ಸೋಮವಾರ, 13 ಮೇ 2024 (20:18 IST)
ಬೆಂಗಳೂರು: ನನಗೆ ಕನ್ನಡ ಓದಲು ಸ್ಪಲ್ಪ ಕಷ್ಟ ಎಂದು ಹೇಳಿಕೆ ನೀಡಿದ ಸಚಿವ ಮಧು ಬಂಗಾರಪ್ಪ ಅವರನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರು ಲೇವಾಡಿ ಮಾಡಿ, ಇದರಿಂದ ಶಿಕ್ಷಣ ಇಲಾಖೆ ದುರ್ಬಲ ಆಗುವುದಿಲ್ಲವೇ ಎಂದಿದ್ದಾರೆ.

ಶಿವಮೊಗ್ಗದಲ್ಲಿ ಈಚೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು, ನನಗೆ ಕನ್ನಡ ಅಷ್ಟೊಂದು ಶುದ್ಧವಾಗಿ ಓದಲು ಬರುವುದಿಲ್ಲ. ಕನ್ನಡ ಉಚ್ಚಾರಣೆಯಲ್ಲಿ ತಪ್ಪಾಗುತ್ತದೆ. ಅದನ್ನು ಕೆಲವರು ಕೆಟ್ಟದಾಗಿ ಟ್ರೋಲ್ ಮಾಡುತ್ತಾರೆ, ಅಂತವರು ಯಾವುದೇ ಕಾರಣಕ್ಕೂ ಉದ್ಧಾರವಾಗಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಾಪ ಹಾಕಿದರು.

ಇವರ ಈ ಹೇಳಿಕೆ ಭಾರೀ ವೈರಲ್ ಆಗಿತ್ತು. ಈ ಸಂಬಂಧ ಎಕ್ಸ್‌ನಲ್ಲಿ ಬರೆದುಕೊಂಡಿರುವ ಬಸನಗೌಡ ಪಾಟೀಲ್ ಅವರು ಕನ್ನಡ ಓದಲು ಬರದ ಸಚಿವರು ಶಿಕ್ಷಣ ನೀತಿಯನ್ನು ನಿರೂಪಿಸಬಲ್ಲರೆ, ಇವರಿಂದ ಶಿಕ್ಷಕ ಇಲಾಖೆ ದುರ್ಬಲವಾಗುವುದಿಲ್ಲವೆ ಎಂದಿದ್ದಾರೆ.

ಬಸನಗೌಡ ಪೋಸ್ಟ್‌ನಲ್ಲಿ ಹೀಗಿದೆ: ಶಿಕ್ಷಣ ಇಲಾಖೆಯ ಸಚಿವರಿಗೆ ಕನ್ನಡ ಬರುವುದಿಲ್ಲವೆಂದು ಸ್ವತಃ ಅವರೇ ಹೇಳಿದ್ದಾರೆ...
ಸದನದಲ್ಲಿ ಸಂಧಿ, ಸಮಾಸ ಬಿಡಿಸುವ ಸಿದ್ದರಾಮಯ್ಯ ನವರೇ, ನಿಮ್ಮ ಸಂಪುಟದಲ್ಲಿರುವ ಶಿಕ್ಷಣ ಸಚಿವರೇ ನನಗೆ ಕನ್ನಡ ಬರೋದಿಲ್ಲವೆಂದು ಹೇಳಿದ್ದಾರೆ...ಕನ್ನಡ ಬರದವರು ಶಿಕ್ಷಣ ನೀತಿಯನ್ನು ಹೇಗೆ ನಿರೂಪಿಸಬಲ್ಲರು ?
ಇದರಿಂದ ಶಿಕ್ಷಣ ಇಲಾಖೆ ದುರ್ಬಲ ಆಗುವುದಿಲ್ಲವೇ ?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ