ಹಿಂದೂ ಕಾರ್ಯಕರ್ತೆಯರ ಕೆಂಗಣ್ಣಿಗೆ ಗುರಿಯಾದ ಶಿಕ್ಷಣ ಇಲಾಖೆ

ಭಾನುವಾರ, 16 ಜುಲೈ 2023 (13:58 IST)
ಶಾಲೆಗಳಲ್ಲಿ ಬಿಸಿಯೂಟ ಸಿಬ್ಬಂದಿ ಬಳೆ ಹಾಕದಂತೆ ಇಲಾಖೆ ಆದೇಶ ಹೊರಡಿಸಿದ್ದು,ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು,ಇದೀಗ ಈ ಆದೇಶಕ್ಕೆ ಹಿಂದೂ ಸಂಘಟನೆ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದಾರೆ.
 
ರಾಜ್ಯದಲ್ಲಿ 55 ಸಾವಿರ ಅಡುಗೆ ಸಿಬ್ಬಂದಿ ಇದ್ದು ಬಹುತೇಕ ಮಂದಿ ಕುಂಕುಮ ಬಳೆ ಹಾಕುವವರೇ,ಇಲಾಖೆಯ ಈ ಆದೇಶ ಈಗ ವೈಯಕ್ತಿಕ ಧಾರ್ಮಿಕ ಸ್ವಾತಂತ್ರ್ಯ ಕಿತ್ತು ಕೊಳ್ಳುವಂತಿದೆ.ಮಕ್ಕಳ ಮೇಲೆ ಕಾಳಜಿ ಇದ್ರೆ, ಈ ನಿಯಮವನ್ನ ಹಿಂದೆಯೇ ಮಾಡಬೇಕಿತ್ತು.ಕೋಟ್ಯಂತರ ತಾಯಂದಿರು ಮನೆಯಲ್ಲಿ ಕೈಗೆ ಬಳೆ ತೊಡದೇ ಅಡುಗೆ ಮಾಡ್ತಾರಾ?ಉದ್ದೇಶ ಪೂರ್ವಕವಾಗಿ ದ್ವೇಷದ ರಾಜಕಾರಣ ಅಂತ ಹಿಂದೂ ಸಂಘಟನೆಗಳ ಹಿಂದೂ ಜನಜಾಗೃತಿ ಸಮಿತಿ ಭವ್ಯ ಗೌಡ ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ