ಮಿಶನ್ 150 ಯೋಜನೆ ರೂಪಿಸಿರುವ ಬಿಜೆಪಿ ಕೊನೆಗೂ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರನ್ನ ರಾಯಣ್ಣ ಬ್ರಿಗೇಡ್ ಸಂಗದಿಂದ ಹೊರಗೆ ತರುವಲ್ಲಿ ಯಶಸ್ವಿಯಾಗಿದೆ.
ರಾಯಣ್ನ ಬ್ರಿಗೇಡ್ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲ ಎಂದು ಶಿವಮೊಗ್ಗದಲ್ಲಿ ಮಾತನಾಡಿದ ಈಶ್ವರಪ್ಪ ಹೇಳಿದ್ಧಾರೆ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬ್ರಿಗೇಡ್ ಚಟುವಟಿಕೆಯಲ್ಲಿ ಭಾಗವಹಿಸದಂತೆ ಸೂಚನೆ ನೀಡಿದ್ದಾರೆ. ಹೀಗಾಗಿ, ಬ್ರಿಗೇಡ್ ಚಟುವಟಿಕೆಯಿಂದ ದೂರ ಉಳಿಯುವುದಾಗಿ ಈಶ್ವರಪ್ಪ ಹೇಳಿದ್ದಾರೆ.
ರಾಯಣ್ಣ ಬ್ರಿಗೇಡ್ ಆರಂಭದ ಬಳಿಕ ಈಶ್ವರಪ್ಪ ಮತ್ತು ಯಡಿಯೂರಪ್ಪ ನಡುವಿನ ಭಿನ್ನಾಭಿಪ್ರಾಯ ಜೋರಾಗಿತ್ತು. ಬಹಿರಂಗ ಹೇಳಿಕೆಗಳ ಮೂಲಕ ಪರಸ್ಪರ ಟೀಕಾಸ್ತ್ರಗಳ ಮೂಲಕ ಭಾರೀ ಸುದ್ದಿಗೆ ಗ್ರಾಸವಾಗಿದ್ದರು. ಇದೀಗ, ಈಶ್ವರಪ್ಪ ನಿರ್ಧಾರದಿಂದ ಬಿಜೆಪಿ ನಿಟ್ಟುಸಿರುಬಿಟ್ಟಂತಾಗಿದೆ,